ಪ್ಯಾರಿಸ್ ಒಲಿಂಪಿಕ್ಸ್
ರಾಯಿಟರ್ಸ್ ಚಿತ್ರ
ಪ್ಯಾರಿಸ್: 2024ರ ಪ್ಯಾರಿಸ್ ಬೇಸಿಗೆ ಒಲಿಂಪಿಕ್ಸ್ ಮತ್ತು ನಂತರ ನಡೆದ ಪ್ಯಾರಾಲಿಂಪಿಕ್ಸ್‌ನಿಂದಾಗಿ ಫ್ರಾನ್ಸ್‌ನ ಬೊಕ್ಕಸಕ್ಕೆ ಸುಮಾರು 60,000 ಕೋಟಿ (6 ಶತಕೋಟಿ ಯೂರೊ) ವೆಚ್ಚವಾಗಿದೆ ಎಂದು ರಾಷ್ಟ್ರೀಯ ಆಡಿಟ್ ಸಂಸ್ಥೆ ಸೋಮವಾರ ಪ್ರಾಥಮಿಕ ಅಂದಾಜು ಮಾಡಿದೆ.
ಕಳೆದ ವರ್ಷದ ಬೇಸಿಗೆ ವೇಳೆ ನಡೆದ ಕ್ರೀಡೆಗಳಿಗೆ 2.77 ಶತಕೋಟಿ ಯೂರೊ ವೆಚ್ಚ ಮಾಡಲಾಗಿದ್ದು, ಇದರಲ್ಲಿ 1.4 ಶತಕೋಟಿ ಯುರೊ ಮೊತ್ತವನ್ನು ಭದ್ರತಾ ಉದ್ದೇಶಗಳಿಗಾಗಿ ವಿನಿಯೋಗಿಸಲಾಗಿದೆ. ಕ್ರೀಡಾ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು 3.19 ಶತಕೋಟಿ ಯೂರೊ ವೆಚ್ಚವಾಗಿದೆ.
ಹೋದ ವರ್ಷದ ಜುಲೈ 26 ರಿಂದ ಆಗಸ್ಟ್ 11ರವರೆಗೆ ಒಲಿಂಪಿಕ್ಸ್ ನಡೆದಿತ್ತು. ಪ್ಯಾರಾಲಿಂಪಿಕ್ಸ್ ಆಗಸ್ಟ್ 28 ರಿಂದ ಸೆ. 8ರವರೆಗೆ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.