ADVERTISEMENT

ಪ್ರೊ ಕಬಡ್ಡಿ: ಯು ಮುಂಬಾ ವಿರುದ್ಧ ಪ್ಯಾಂಥರ್ಸ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 19:32 IST
Last Updated 7 ನವೆಂಬರ್ 2022, 19:32 IST

ಪುಣೆ: ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡದವರು ಪ್ರೊ ಕಬಡ್ಡಿ ಲೀಗ್‌ನಲ್ಲಿ 42–39 ರಲ್ಲಿ ಯು ಮುಂಬಾ ತಂಡವನ್ನು ಮಣಿಸಿ ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದರು.

ಸೋಮವಾರ ನಡೆದ ಪಂದ್ಯದಲ್ಲಿ ರೇಡರ್‌ ಅರ್ಜುನ್‌ ದೇಶ್ವಾಲ್‌ ಅವರು 15 ಪಾಯಿಂಟ್ಸ್ ಕಲೆಹಾಕಿ ಪ್ಯಾಂಥರ್ಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮುಂಬಾ ತಂಡಕ್ಕೆ ಎದುರಾದ ಸತತ ಎರಡನೇ ಸೋಲು ಇದು.

ಅರ್ಜುನ್‌ ಅವರ ಸೂಪರ್‌ ರೇಡ್‌ ನೆರವಿನಿಂದ ಆರಂಭದಿಂದಲೇ ಪಾಯಿಂಟ್ಸ್‌ ಕಲೆಹಾಕಿದ ಪ್ಯಾಂಥರ್ಸ್‌, ಎದುರಾಳಿ ತಂಡವನ್ನು ಆಲೌಟ್‌ ಮಾಡಿ 9–1 ರಲ್ಲಿ ಮುನ್ನಡೆ ಗಳಿಸಿತು. ಆಶೀಶ್‌ (11 ಪಾಯಿಂಟ್ಸ್‌) ಮಿಂಚಿನ ಆಟದ ಬಲದಿಂದ ಮರುಹೋರಾಟ ನಡೆಸಿದ ಮುಂಬಾ 17–17 ರಲ್ಲಿ ಸಮಬಲ ಸಾಧಿಸಿತು. ವಿರಾಮದ ವೇಳೆಗೆ 20–19 ರಲ್ಲಿ ಮುನ್ನಡೆ ಪಡೆದಿದ್ದ ಪ್ಯಾಂಥರ್ಸ್‌, ದ್ವಿತೀಯಾರ್ಧದಲ್ಲಿ ಎಚ್ಚರಿಕೆಯ ಆಟವಾಡಿ ಗೆಲುವು ಪಡೆಯಿತು.

ADVERTISEMENT

ದಿನದ ಎರಡನೇ ಪಂದ್ಯದಲ್ಲಿ ಪಟ್ನಾ ಪೈರೇಟ್ಸ್‌ 41–32 ರಲ್ಲಿ ಹರಿಯಾಣ ಸ್ಟೀಲರ್ಸ್‌ ತಂಡವನ್ನು ಪರಾಭವಗೊಳಿಸಿತು.

ಇಂದಿನ ಪಂದ್ಯಗಳು

ಬೆಂಗಾಲ್‌ ವಾರಿಯರ್ಸ್‌– ಯು.ಪಿ.ಯೋಧಾಸ್

ದಬಂಗ್ ಡೆಲ್ಲಿ– ತೆಲುಗು ಟೈಟನ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.