ADVERTISEMENT

ಪ್ರೊ ಕಬಡ್ಡಿ ಲೀಗ್: ಡೆಲ್ಲಿ, ಯೋಧಾಸ್‌ಗೆ ಗೆಲುವು

ಪಿಟಿಐ
Published 3 ಫೆಬ್ರುವರಿ 2024, 23:30 IST
Last Updated 3 ಫೆಬ್ರುವರಿ 2024, 23:30 IST
<div class="paragraphs"><p>ಪ್ರೊ ಕಬಡ್ಡಿ ಲೀಗ್‌</p></div>

ಪ್ರೊ ಕಬಡ್ಡಿ ಲೀಗ್‌

   

ನವದೆಹಲಿ: ಪ್ರಮುಖ ರೈಡರ್‌ ಆಶು ಮಲಿಕ್ ಅವರ 20 ಪಾಯಿಂಟ್ಸ್ ನೆರವಿನಿಂದ ದಬಾಂಗ್‌ ಡೆಲ್ಲಿ ತಂಡವು, ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಪಾಯಿಂಟ್ಸ್ ಪಟ್ಟಿಯ ತಳದಲ್ಲಿರುವ ತೆಲುಗು ಟೈಟನ್ಸ್ ತಂಡವನ್ನು ಶನಿವಾರ 44–33 ಪಾಯಿಂಟ್‌ಗಳಿಂದ ಸೋಲಿಸಿತು.

ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೈಟನ್ಸ್ ಪರ ನಾಯಕ ಪವನ್ ಶೆರಾವತ್ 9 ಮತ್ತು ರಾಬಿನ್ ಚೌಧರಿ ಎಂಟು ಪಾಯಿಂಟ್ಸ್ ಗಳಿಸಿದರು.

ADVERTISEMENT

ಇನ್ನೊಂದು ಪಂದ್ಯದಲ್ಲಿ ಯುಪಿ ಯೋಧಾಸ್ ತಂಡ 39–23 ಪಾಯಿಂಟ್ಸ್‌ಗಳಿಂದ ಯು ಮುಂಬಾ ಮೇಲೆ ಜಯಗಳಿಸಿತು. ಯೋಧಾಸ್ ಪರ ನಾಯಕ ಹಾಗೂ ಪ್ರಮುಖ ರೈಡರ್ ಪ್ರದೀಪ್ ನರ್ವಾಲ್ 12 ಪಾಯಿಂಟ್ಸ್ ಗಳಿಸಿ ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.