ADVERTISEMENT

ಪ್ರೊ ಕಬಡ್ಡಿ | ಮಲಿಕ್ ಮಿಂಚು: ಬೆಂಗಾಲ್ ವಾರಿಯರ್ಸ್ ವಿರುದ್ಧ ಡೆಲ್ಲಿಗೆ ಜಯ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 16:15 IST
Last Updated 9 ಸೆಪ್ಟೆಂಬರ್ 2025, 16:15 IST
   

ವಿಶಾಖಪಟ್ಟಣ: ನಾಯಕನಿಗೆ ತಕ್ಕ ಆಟವಾಡಿದ ಆಶು ಮಲಿಕ್ ಅವರ ನೆರವಿನಿಂದ ದಬಂಗ್ ಡೆಲ್ಲಿ ತಂಡವು ಪ್ರೊ ಕಬಡ್ಡಿ ಟೂರ್ನಿಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಜಯಿಸಿತು. 

ವಿಶ್ವನಾಥ್ ಸ್ಪೋರ್ಟ್ಸ್ ಕ್ಲಬ್  ಒಳಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡವು 45–34ರಿಂದ ಬೆಂಗಾಲ್ ವಾರಿಯರ್ಸ್ ವಿರುದ್ಧ ಜಯಿಸಿತು.

ಡೆಲ್ಲಿ ತಂಡವು ಆರಂಭದಿಂದಲೇ ಪಾರಮ್ಯ ಮೆರೆಯಿತು. ಪ್ರಥಮಾರ್ಧದಲ್ಲಿ ಡೆಲ್ಲಿ ತಂಡವು 23–14ರಿಂದ ಮುನ್ನಡೆ ಸಾಧಿಸಿತ್ತು. ನಂತರದ ಅವಧಿಯಲ್ಲಿ ಬೆಂಗಾಲ್ ತಂಡವು ಮರುಹೋರಾಟ ತೋರಿತು. ಹಾಗಾಗಿ ಡೆಲ್ಲಿ ತಂಡವು ಈ ಅವಧಿಯಲ್ಲಿ ಕೇವಲ (22–20) ಎರಡು ಪಾಯಿಂಟ್ ಮುನ್ನಡೆ ಪಡೆಯಿತು. 

ADVERTISEMENT

ಪ್ರಭಾವಶಾಲಿ ಆಟವಾಡಿದ ರೇಡರ್ ಆಶು ಮಲಿಕ್ 16 ಅಂಕಗಳನ್ನು ಗಳಿಸಿದರು.  ಅವರು ಒಟ್ಟು 25 ರೇಡ್‌ಗಳನ್ನು ಸಂಘಟಿಸಿದರು. ಅದರಲ್ಲಿ 11 ಟಚ್ ಪಾಯಿಂಟ್ ಪಡೆಯುವಲ್ಲಿ ಯಶಸ್ವಿಯಾದರು. 5 ಬೋನಸ್ ಅಂಕಗಳನ್ನೂ ತಮ್ಮ ಬುಟ್ಟಿಗೆ ಹಾಕಿಕೊಂಡು ಬಂದರು. 

ಅವರಿಗೆ ಉತ್ತಮ ಜೊತೆ ನೀಡಿದ ಅಜಿಂಕ್ಯ ಪವಾರ್ ಕೂಡ ಎಂಟು ಅಂಕಗಳ ಕಾಣಿಕೆ ನೀಡಿದರು. ಅದರಲ್ಲಿ ಅವರು ಐದು ಟಚ್ ಪಾಯಿಂಟ್ ಮತ್ತು 3 ಟ್ಯಾಕಲ್ ಪಾಯಿಂಟ್ಸ್‌ ಸಂಗ್ರಹಿಸಿದರು. 

ಬೆಂಗಾಲ್ ತಂಡದ ನಾಯಕ ದೇವಾಂಕ್ ಕೂಡ ದಾಳಿಯಲ್ಲಿ 12 ಅಂಕಗಳನ್ನು ಗಳಿಸಿದರು. ಅವರೊಂದಿಗೆ ಎಸ್‌. ವಿಶ್ವಾಸ್ ಕೂಡ (9 ಪಾಯಿಂಟ್) ಮಿಂಚಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.