ADVERTISEMENT

ಈ ವರ್ಷದ ರಷ್ಯನ್‌ ಗ್ರ್ಯಾನ್‌ ಪ್ರಿ ಫಾರ್ಮುಲಾ ಒನ್‌ ರೇಸ್‌ ರದ್ದು

ರಾಯಿಟರ್ಸ್
Published 25 ಫೆಬ್ರುವರಿ 2022, 13:18 IST
Last Updated 25 ಫೆಬ್ರುವರಿ 2022, 13:18 IST
ಸಂಗ್ರಹ ಚಿತ್ರ – ರಾಯಿಟರ್ಸ್ ಕೃಪೆ
ಸಂಗ್ರಹ ಚಿತ್ರ – ರಾಯಿಟರ್ಸ್ ಕೃಪೆ   

ಮಾಸ್ಕೊ: ಉಕ್ರೇನ್ ವಿರುದ್ಧ ಸೇನಾ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಈ ವರ್ಷದ ರಷ್ಯನ್‌ ಗ್ರ್ಯಾನ್‌ ಪ್ರಿ ಫಾರ್ಮುಲಾ ಒನ್‌ ರೇಸ್‌ ರದ್ದುಗೊಳಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಸೋಚಿಯ ಒಲಿಂಪಿಕ್ ಪಾರ್ಕ್‌ನಲ್ಲಿ ಸೆಪ್ಟೆಂಬರ್‌ 25ರಿಂದ ರೇಸ್ ಆಯೋಜಿಸಲು ಈ ಹಿಂದೆ ತೀರ್ಮಾನಿಸಲಾಗಿತ್ತು.

‘ಉಕ್ರೇನ್‌ನಲ್ಲಿನ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇವೆ. ಘಟನೆಯಿಂದ ಬೇಸರ ಹಾಗೂ ಆಘಾತವಾಗಿದೆ. ಸದ್ಯದ ಪರಿಸ್ಥಿತಿಗೆ ತ್ವರಿತವಾದ ಮತ್ತು ಶಾಂತಿಯುತ ಪರಿಹಾರ ದೊರೆಯುವ ಭರವಸೆ ಇದೆ’ ಎಂದು ಆಯೋಜಕರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ADVERTISEMENT

ಫಾರ್ಮುಲಾ ಒನ್, ಎಫ್‌ಐಎ ಹಾಗೂ ತಂಡಗಳು ರೇಸ್‌ಗೆ ಬೆಂಬಲದ ಕುರಿತು ಗುರುವಾರ ಸಂಜೆ ಮಾತುಕತೆ ನಡೆಸಿದ್ದವು. ಸದ್ಯದ ಪರಿಸ್ಥಿತಿಯಲ್ಲಿ ರಷ್ಯನ್‌ ಗ್ರ್ಯಾನ್‌ ಪ್ರಿ ಆಯೋಜಿಸುವುದು ಅಸಾಧ್ಯ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.