ADVERTISEMENT

ಕರ್ನಾಟಕದ 17ರ ಹರೆಯದ ಯುವ ಪ್ರತಿಭೆ ಸಂಭವ್ ಅತಿ ವೇಗದ ಈಜುಪಟು

ಪಿಟಿಐ
Published 28 ಅಕ್ಟೋಬರ್ 2021, 16:48 IST
Last Updated 28 ಅಕ್ಟೋಬರ್ 2021, 16:48 IST
ಸಂಭವ್ ಆರ್
ಸಂಭವ್ ಆರ್   

ಬೆಂಗಳೂರು: 74ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್‌ಷಿಪ್‌‌ನಲ್ಲಿ ಕರ್ನಾಟಕದ ಯುವ ಪ್ರತಿಭಾವಂತ ಈಜುಪಟು ಸಂಭವ್ ಆರ್. ಅತಿ ಕಡಿಮೆ ಅವಧಿಯಲ್ಲಿ ಗುರಿ ಕ್ರಮಿಸುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ.

17ರ ಹರೆಯದ ಸಂಭವ್, 50 ಮೀಟರ್ ಫ್ರೀಸ್ಟೈಲ್‌ ವಿಭಾಗದಲ್ಲಿ ಕೇವಲ 23.65 ಸೆಕೆಂಡುಗಳಲ್ಲಿ ಗುರಿ ಕ್ರಮಿಸುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

ಈ ಮೂಲಕ ಪಸಕ್ತ ಸಾಗುತ್ತಿರುವ ಕೂಟದ ಅತಿ ವೇಗದ ಈಜುಪಟು ಎನಿಸಿದ್ದಾರೆ. ಈ ವಿಭಾಗದಲ್ಲಿ ಮಹಾರಾಷ್ಟ್ರದ ಮಿಹಿರ್ ಆಮ್ರೆ (23.76) ಎರಡು ಹಾಗೂ ಹೀರ್ ಶಾ (23.93) ಮೂರನೇ ಸ್ಥಾನ ಗಿಟ್ಟಿಸಿದರು.

ಇತ್ತೀಚಿಗೆ ನಡೆದ 47ನೇ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್‌ಶಿಪ್‌ನಲ್ಲಿ ಸಂಭವ್ ನಾಲ್ಕು ಚಿನ್ನದ ಪದಕಗಳನ್ನು ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.