ADVERTISEMENT

ಸಿಂಧು, ಶ್ರೀಕಾಂತ್‌ ಕ್ವಾರ್ಟರ್ ಫೈನಲ್‌ಗೆ

ಚೀನಾ ಓಪನ್‌ ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಸೂಪರ್‌ 750 ಚಾಂಪಿಯನ್‌ಷಿಪ್‌

ಪಿಟಿಐ
Published 8 ನವೆಂಬರ್ 2018, 20:24 IST
Last Updated 8 ನವೆಂಬರ್ 2018, 20:24 IST
ಪಿ.ವಿ.ಸಿಂಧು
ಪಿ.ವಿ.ಸಿಂಧು   

ಫುಜೋ: ಭಾರತದ ಪಿ.ವಿ.ಸಿಂಧು ಮತ್ತು ಕಿದಂಬಿ ಶ್ರೀಕಾಂತ್ ಅವರು ಇಲ್ಲಿ ನಡೆಯುತ್ತಿರುವ ಚೀನಾ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಮಾಜಿ ಚಾಂಪಿಯನ್‌ ಸಿಂಧು, ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಥಾಯ್ಲೆಂಡ್‌ನ ಬುಸನಾನ್‌ ಒಂಬಮುಂಗ್ಬಾನ್ ಅವರನ್ನು 21–12, 21–15ರಿಂದ ಸುಲಭವಾಗಿ ಮಣಿಸಿದರು.

ಶ್ರೀಕಾಂತ್‌ ಅವರಿಗೆ ಇಂಡೊ ನೇಷ್ಯಾದ ಟಾಮಿ ಸುಗಿಯಾತೊ ಭಾರಿ ಸವಾಲೊಡ್ಡಿದರು. ಆದರೆ ಅಂತಿಮವಾಗಿ ಭಾರತದ ಆಟಗಾರ 10–21, 21–9, 21–9ರಿಂದ ಗೆದ್ದರು.

ADVERTISEMENT

ಸಿಂಧುಗೆ ಇಲ್ಲಿ ಮೂರನೇ ಶ್ರೇಯಾಂಕ ನೀಡಲಾಗಿದೆ. ಎಂಟರ ಘಟ್ಟದ ಪಂದ್ಯದಲ್ಲಿ ಅವರಿಗೆ ಕಠಿಣ ಸವಾಲು ಎದುರಾಗಿದೆ. ಎಂಟನೇ ಶ್ರೇಯಾಂಕಿತ ಚೀನಾದ ಆಟಗಾರ್ತಿ ಹೇ ಬಿಂಗ್ಜಿಯಾವೊ ಅವರನ್ನು ಸಿಂಧು ಎದುರಿಸಲಿದ್ದಾರೆ. ಈ ಹಿಂದೆ ಎರಡು ಬಾರಿ ಇವರಿಬ್ಬರು ಮುಖಾಮುಖಿಯಾಗಿದ್ದು ಸಿಂಧು ಒಮ್ಮೆಯೂ ಗೆದ್ದಿಲ್ಲ. ಸೇಡು ತೀರಿಸಿಕೊಳ್ಳಲು ಸಿಂಧು ಇಲ್ಲಿ ಪ್ರಯತ್ನಿಸಲಿದ್ದಾರೆ.

ಶ್ರೀಕಾಂತ್‌ಗೆ ಮುಂದಿನ ಸುತ್ತಿನಲ್ಲಿ ಚೀನಾ ತೈಪೆಯ ಚೋ ಟೀನ್‌ ಚೆನ್‌ ಎದುರಾಳಿ.

ಮೂರು ವರ್ಷಗಳ ಅವಧಿಯಲ್ಲಿ ಚೆನ್‌ ವಿರುದ್ಧ ಶ್ರೀಕಾಂತ್ ಎರಡು ಬಾರಿ ಸೋತಿದ್ದಾರೆ. ಹೀಗಾಗಿ ಅವರು ಕೂಡ ಇಲ್ಲಿ ಸೇಡು ತೀರಿಸಿಕೊಳ್ಳುವ ಹಂಬಲದೊಂದಿಗೆ ಕಣಕ್ಕೆ ಇಳಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.