ಫುಟ್‌ಬಾಲ್
ರಾಯಿಟರ್ಸ್ ಚಿತ್ರ
ಇಸ್ಲಾಮಾಬಾದ್: ವಿಶ್ವ ಫುಟ್‌ಬಾಲ್ ಮಂಡಳಿ ಹಾಗೂ ಏಷ್ಯನ್ ಫುಟ್‌ಬಾಲ್ ಒಕ್ಕೂಟ ಒಪ್ಪಿತ ನಿಯಮಾವಳಿಯನ್ನು ಅಳವಡಿಸಿಕೊಂಡ ಪಾಕಿಸ್ತಾನ ಫುಟ್‌ಬಾಲ್ ಒಕ್ಕೂಟದ (ಪಿಎಫ್‌ಎ) ಮೇಲಿನ ಅಮಾನತನ್ನು ಫಿಫಾ ಹಿಂಪಡೆದಿದೆ.
ಲಾಹೋರ್‌ನಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಪಾಕಿಸ್ತಾನ ಫುಟ್‌ಬಾಲ್ ಒಕ್ಕೂಟವು ತಿದ್ದುಪಡಿಯನ್ನು ಅಂಗೀಕರಿಸಿತು. ಫಿಫಾ ಅಗತ್ಯಗಳನ್ನು ಈಡೇರಿಸಿದ ಬೆನ್ನಲ್ಲೇ ಅಮಾನತು ಆದೇಶವನ್ನು ಹಿಂಪಡೆಯಲಾಯಿತು ಎಂದು ವರದಿಯಾಗಿದೆ. ಫೆ. 6ರಂದು ಆದೇಶ ಹೊರಡಿಸಿದ್ದ ಫಿಫಾ, ಪಿಎಫ್ಎ ಅನ್ನು ಅಮಾನತು ಮಾಡಿತ್ತು.
'ಮೂರನೇ ವ್ಯಕ್ತಿಗಳ ಪ್ರವೇಶದಿಂದಾಗಿ 2017 ಹಾಗೂ 2021ರಲ್ಲಿ ಪಿಎಫ್‌ಎ ಅನ್ನು ಫಿಫಾ ಅಮಾನತು ಮಾಡಿತ್ತು. ಸಮಿತಿ ವಿಷಯದಲ್ಲಿ ಶಿಸ್ತು ಕ್ರಮ ಎದುರಿಸಿದ್ದ ಪಿಎಫ್‌ಎ ವಿರುದ್ಧ ಅಮಾನತನ್ನು 2022ರ ಜೂನ್‌ನಲ್ಲಿ ಫಿಫಾ ಹಿಂಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವಿಷಯ ಹಂಚಿಕೊಂಡಿರುವ ಪಿಎಫ್‌ಎ, ಫಿಫಾ ಮತ್ತು ಏಷ್ಯನ್ ಫುಟ್‌ಬಾಲ್ ಒಕ್ಕೂಟಕ್ಕೆ ಧನ್ಯವಾದ ಹೇಳಿದೆ.
ಜತೆಗೆ ಕೋಚ್ ಸ್ಟೀಫನ್ ಕಾನ್‌ಸ್ಟೆಂಟೈನ್ ಅವರನ್ನು ತಂಡದ ತರಬೇತುದಾರ ಹುದ್ದೆಗೆ ಮತ್ತೆ ನೇಮಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.