ADVERTISEMENT

11ರಿಂದ ಶಾರ್ಟ್‌ ಕೋರ್ಸ್‌ ಈಜು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 15:53 IST
Last Updated 7 ಡಿಸೆಂಬರ್ 2019, 15:53 IST

ಬೆಂಗಳೂರು: ಕರ್ನಾಟಕ ಈಜು ಸಂಸ್ಥೆ ಹಾಗೂ ಪಿಇಟಿ ಈಜುಕೇಂದ್ರದ ಸಹಯೋಗದಲ್ಲಿ ಇದೇ ತಿಂಗಳ 11ರಿಂದ 14ರವರೆಗೆ ರಾಜ್ಯ ಶಾರ್ಟ್‌ ಕೋರ್ಸ್‌ ಚಾಂಪಿಯನ್‌ಷಿಪ್‌ ನಡೆಯಲಿದೆ.

ಮಂಡ್ಯದ ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜಿನ ಆವರಣದಲ್ಲಿರುವ ಈಜುಕೊಳದಲ್ಲಿ ನಿಗದಿತ ದಿನಗಳಂದು ಬೆಳಿಗ್ಗೆ 8ರಿಂದ ಸಂಜೆ 6 ಗಂಟೆಯವರೆಗೆ ಸ್ಪರ್ಧೆಗಳು ಜರುಗಲಿವೆ.

ಈ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಸಾಮರ್ಥ್ಯ ತೋರುವ ಈಜುಪಟುಗಳನ್ನು ಕರ್ನಾಟಕ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ. ಈ ತಂಡವು 2020ರ ಜನವರಿ 3ರಿಂದ 5ರವರೆಗೆ ಆಂಧ್ರಪ್ರದೇಶದಲ್ಲಿ ಆಯೋಜನೆಯಾಗಿರುವ ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.