ಪ್ರೊ ಕಬಡ್ಡಿ ಲೀಗ್
ನವದೆಹಲಿ : ಅಂತಿಮ ಹಂತದಲ್ಲಿ ಒತ್ತಡ ನಿಭಾಯಿಸಿಕೊಂಡು ಆಡಿದ ತೆಲುಗು ಟೈಟನ್ಸ್ ತಂಡ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಭಾನುವಾರ ಗುಜರಾತ್ ಜೈಂಟ್ಸ್ ತಂಡವನ್ನು 30–25 ಅಂಕಗಳಿಂದ ಸೋಲಿಸಿತು.
ತ್ಯಾಗರಾಜ ಕ್ರೀಡಾ ಕಾಂಪ್ಲೆಕ್ಸ್‌ನಲ್ಲಿ ನಡೆದ ಈ ಆವೃತ್ತಿಯ 97ನೇ ಪಂದ್ಯದ ಬಹುತೇಕ ಅವಧಿಯಲ್ಲಿ ಸ್ಕೋರ್ ಸಮಸಮನಾಗಿ ಸಾಗಿತು. ವಿರಾಮದ ವೇಳೆಗೆ ಸ್ಕೋರ್ 11–11ರಲ್ಲಿ ಸಮನಾಗಿತ್ತು.
ಟೈಟನ್ಸ್ 17 ಪಂದ್ಯಗಳಲ್ಲಿ ಹತ್ತನೇ ಗೆಲುವಿನ ಮೂಲಕ 20 ಅಂಕ ಕಲೆಹಾಕಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಜೈಂಟ್ಸ್ (12 ಅಂಕ) ಎಂಟನೇ ಸ್ಥಾನದಲ್ಲಿದೆ.
ಆಲ್‌ರೌಂಡರ್‌ಗಳಾದ ನಾಯಕ ವಿಜಯ ಮಲಿಕ್ (8 ಅಂಕ) ಮತ್ತು ಭರತ್ (7) ಅವರು ಟೈಟನ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಜೈಂಟ್ಸ್ ಕಡೆ ರೇಡರ್‌ಗಳಾದ ಹಿಮಾಂಶು ಸಿಂಗ್ (6) ಮತ್ತು ನಾಯಕನೂ ಆಗಿರುವ ರಾಕೇಶ್ (5) ಹೆಚ್ಚಿನ ಕಾಣಿಕೆ ನೀಡಿದರು.