ADVERTISEMENT

ಒತ್ತಡ ಮರೆತು ಪದಕಕ್ಕೆ ಗುರಿಯಿಡಿ: ಸಚಿನ್ ತೆಂಡೂಲ್ಕರ್

ಪಿಟಿಐ
Published 20 ಜುಲೈ 2021, 17:10 IST
Last Updated 20 ಜುಲೈ 2021, 17:10 IST
ಸಚಿನ್ ತೆಂಡೂಲ್ಕರ್‌– ಪಿಟಿಐ ಚಿತ್ರ
ಸಚಿನ್ ತೆಂಡೂಲ್ಕರ್‌– ಪಿಟಿಐ ಚಿತ್ರ   

ನವದೆಹಲಿ: ಒತ್ತಡಕ್ಕೆ ಶರಣಾಗದೆ ಪದಕ ಗೆಲ್ಲುವತ್ತ ಚಿತ್ತ ಹರಿಸಿ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರು ಅಥ್ಲೀಟ್‌ಗಳಿಗೆ ಕರೆ ನೀಡಿದ್ದಾರೆ.

ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ ಕ್ರೀಡಾಪಟುಗಳಿಗೆ ಭಾರತ ಅಥ್ಲೆಟಿಕ್ಸ್ ಫೆಡರೇಷನ್ (ಎಎಎಫ್‌ಐ) ಆನ್‌ಲೈನ್ ಮೂಲಕ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಂದರ್ಭದಲ್ಲಿ ಅವರು ಮಾತನಾಡಿದರು.

‘ಕ್ರೀಡೆಗಳಲ್ಲಿ ಗೆಲುವು–ಸೋಲು ಇದ್ದದ್ದೆ ಎಂದು ಬಹಳಷ್ಟು ಜನ ಹೇಳುತ್ತಾರೆ. ಆದರೆ ಗೆಲುವು ನಿಮ್ಮದಾಗಬೇಕು. ಎದುರಾಳಿಗೆ ಸೋಲಾಗಬೇಕು ಎಂಬುದೇ ನಾನು ನಿಮಗೆ ನೀಡುವ ಸಂದೇಶ‘ ಎಂದು ಸಚಿನ್‌ ನುಡಿದರು.

ADVERTISEMENT

ಟೋಕಿಯೊಗೆ ತೆರಳಲಿರುವ ಭಾರತದ ಟ್ರ್ಯಾಕ್ ಆ್ಯಂಡ್‌ ಫೀಲ್ಡ್ ಅಥ್ಲೀಟ್‌ಗಳ ತಂಡವು 47 ಜನರನ್ನು ಒಳಗೊಂಡಿದೆ.25 ಮಂದಿ ಅಥ್ಲೀಟ್‌ಗಳು, 11 ಕೋಚ್‌ಗಳು, ಎಂಟು ಮಂದಿ ನೆರವು ಸಿಬ್ಬಂದಿ, ಒಬ್ಬ ವೈದ್ಯ ಮತ್ತು ಒಬ್ಬರು ಟೀಮ್ ಲೀಡರ್ ಇದರಲ್ಲಿ ಇದ್ದಾರೆ.

ಇದೇ 23ರಂದು ಈ ತಂಡವು ಟೋಕಿಯೊಗೆ ಪ್ರಯಾಣ ಬೆಳೆಸಲಿದೆ. ಜುಲೈ 30ರಿಂದ ಆಗಸ್ಟ್ 8ರವರೆಗೆ ಅಥ್ಲೆಟಿಕ್ಸ್ ಸ್ಪರ್ಧೆಗಳು ನಡೆಯಲಿವೆ. ಡಿಸ್ಕಸ್‌ ಥ್ರೊ ಪಟು ನೀರಜ್ ಚೋಪ್ರಾ ಅವರು ಪದಕದ ಭರವಸೆ ಮೂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.