ರಾಜ್ಯಮಟ್ಟದ ಜೂನಿಯರ್ ಥ್ರೋಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ಮೈಸೂರಿನ ಬಾಲಕರ ತಂಡ
ಬೆಂಗಳೂರು: ಮೈಸೂರಿನ ಬಾಲಕರ ಮತ್ತು ಬಾಲಕಿಯರ ತಂಡಗಳು ಈಚೆಗೆ ನಡೆದ ರಾಜ್ಯಮಟ್ಟದ ಜೂನಿಯರ್ ಥ್ರೋಬಾಲ್ ಚಾಂಪಿಯನ್ ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡವು.
ಕರ್ನಾಟಕ ಅಮೆಚೂರ್ ಥ್ರೋಬಾಲ್ ಸಂಸ್ಥೆಯ ಆಶ್ರಯದಲ್ಲಿ ಬೆಂಗಳೂರಿನ ಕ್ಯಾಥೆಡ್ರಲ್ ಕಾಲೇಜ್ ಮೈದಾನದಲ್ಲಿ ನಡೆದ ಬಾಲಕರ ಫೈನಲ್‌ನಲ್ಲಿ ಮೈಸೂರು ತಂಡವು 25-15, 25-09 (2-0) ರಿಂದ ಬೆಂಗಳೂರು ಅನ್‌ಪ್ರಿಡಿಕ್ಟೆಬಲ್ ತಂಡವನ್ನು ಮಣಿಸಿತು. ಬಾಲಕಿಯರ ಫೈನಲ್‌ನಲ್ಲಿ ಮೈಸೂರು ತಂಡವು 25-19, 25-16 (2-0)ರಿಂದ ಬಿಎಂಎಸ್ ಕಾಲೇಜು ತಂಡವನ್ನು ಸೋಲಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.