ADVERTISEMENT

Tokyo Olympic| ಮೀರಾಬಾಯಿಗೆ ಚೀನಾ ವೇಟ್‌ಲಿಫ್ಟರ್ ಸವಾಲು

ಪಿಟಿಐ
Published 23 ಜುಲೈ 2021, 18:39 IST
Last Updated 23 ಜುಲೈ 2021, 18:39 IST
ಮೀರಾಬಾಯಿ ಚಾನು –ಪಿಟಿಐ ಚಿತ್ರ
ಮೀರಾಬಾಯಿ ಚಾನು –ಪಿಟಿಐ ಚಿತ್ರ   

ಟೋಕಿಯೊ: ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ವೇಟ್‌ಲಿಫ್ಟಿಂಗ್‌ನ ಪದಕ ಹಂತದ ಸ್ಪರ್ಧೆಯಲ್ಲಿ ಶನಿವಾರ ಹೋರಾಡಲಿದ್ದಾರೆ. ರಿಯೊ ಒಲಿಂಪಿಕ್ಸ್‌ನಲ್ಲಿ ಗಾಯದ ಸಮಸ್ಯೆಯಿಂದಾಗಿ ಕಂಗೆಟ್ಟಿದ್ದ ಚಾನು ಈಗ 49 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ಭಾರತಕ್ಕೆ ವೇಟ್‌ಲಿಫ್ಟಿಂಗ್‌ನಲ್ಲಿ ಪದಕ ಗೆದ್ದುಕೊಡುವ ನೆಚ್ಚಿನ ಕ್ರೀಡಾಪಟು ಎಂದೇ ಅವರನ್ನು ಬಿಂಬಿಸಲಾಗಿದೆ.

ಎಂಟು ಮಹಿಳಾ ವೇಟ್‌ಲಿಫ್ಟರ್‌ಗಳು ಇರುವ ಸ್ಪರ್ಧೆಯಲ್ಲಿ ಚೀನಾದ ಹೋವ್ ಜಿಹುಯಿ ಅವರು ಮೀರಾಬಾಯಿಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆ ಇದೆ. ಮೀರಾ ಅವರ ವೈಯಕ್ತಿಕ ಶ್ರೇಷ್ಠ ಸಾಧನೆ 205 ಕೆಜಿ ಆಗಿದ್ದರೆ, ಚೀನಾ ವೇಟ್‌ಲಿಫ್ಟರ್‌ 213 ಕೆಜಿ ಭಾರ ಎತ್ತಿ ಗಮನ ಸೆಳೆದಿದ್ದಾರೆ.

ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟವರು ಕರ್ಣಂ ಮಲ್ಲೇಶ್ವರಿ ಅವರೊಬ್ಬರೆ. ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಅವರು 69 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದರು.

ADVERTISEMENT

ಶನಿವಾರದ ಸ್ಪರ್ಧೆಯಲ್ಲಿ ಅಮೆರಿಕದ ಡೆಲಾಕ್ರೂಜ್ ಜೋರ್ಡಾನ್ ಎಲಿಜಬೆತ್ ಮತ್ತು ಇಂಡೊನೇಷ್ಯಾದ ಐಸಾ ವಿಂಡಿ ಕಾಂಟಿಕ ಕೂಡ ಮೀರಾಗೆ ಸವಾಲೊಡ್ಡುವ ಸಾಧ್ಯತೆ ಇದೆ.

ಮಹಿಳೆಯರ 49 ಕೆಜಿ: ಪದಕ ಸುತ್ತಿನ ಸ್ಪರ್ಧೆ

ಸಮಯ: ಬೆಳಿಗ್ಗೆ 10.20

ಸ್ಥಳ: ಟೋಕಿಯೊ ಇಂಟರ್‌ನ್ಯಾಷನಲ್ ಫೋರಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.