ADVERTISEMENT

PHOTOS | ಮೊದಲ ಒಲಿಂಪಿಕ್ಸ್‌ನಲ್ಲೇ ನೀರಜ್ ಚೋಪ್ರಾ ಸ್ಮರಣೀಯ ಸಾಧನೆ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಜಾವೆಲಿನ್‌ ಥ್ರೋ ಅಥ್ಲೀಟ್ ನೀರಜ್‌ ಚೋಪ್ರಾ ಫೈನಲ್‌ಗೆ ಪ್ರವೇಶಿಸಿದ್ದಾರೆ. ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ನೀರಜ್‌, 'ಎ ಗುಂಪಿನ' ಅರ್ಹತಾ ಸುತ್ತಿನ ಮೊದಲ ಪ್ರಯತ್ನದಲ್ಲಿಯೇ 86.5 ಮೀಟರ್‌ ದೂರಕ್ಕೆ ಜಾವೆಲಿನ್‌ ಎಸೆಯುವ ಮೂಲಕ ನೇರವಾಗಿ ಫೈನಲ್ಸ್‌ಗೆ ಅರ್ಹತೆ ಪಡೆದರು. ಶನಿವಾರ ಪದಕ ಸುತ್ತಿನ ಸ್ಪರ್ಧೆಯು ನಡೆಯಲಿವೆ.

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 7:12 IST
Last Updated 4 ಆಗಸ್ಟ್ 2021, 7:12 IST
ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ ಫೈನಲ್ಸ್‌ಗೆ ಲಗ್ಗೆ
ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ ಫೈನಲ್ಸ್‌ಗೆ ಲಗ್ಗೆ   
ಮೊದಲ ಪ್ರಯತ್ನದಲ್ಲಿಯೇ 86.5 ಮೀಟರ್‌ ದೂರಕ್ಕೆ ಜಾವೆಲಿನ್‌ ಎಸೆದು ನೇರವಾಗಿ ಫೈನಲ್ಸ್‌ಗೆ ಅರ್ಹತೆ
23ವರ್ಷದ ನೀರಜ್ ಚೋಪ್ರಾ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.
ಕಾಮನ್‌ವೆಲ್ತ್‌ ಹಾಗೂ ಏಷ್ಯನ್‌ ಕ್ರೀಡಾಕೂಟಗಳಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ.
ನೀರಜ್ ಚೋಪ್ರಾ ವೈಯಕ್ತಿಕ ಶ್ರೇಷ್ಠ ಸಾಧನೆ: 88.07 ಮೀಟರ್ಸ್‌ (2021)
ಮಹಾಕ್ರೀಡಾಕೂಟದಲ್ಲಿ ನೀರಜ್ ಮಹತ್ತರ ಸಾಧನೆ
ಜಾವೆಲಿನ್ ಎಸೆತದಲ್ಲಿ ಭಾರತದ ಭರವಸೆ
ಐತಿಹಾಸಿಕ ಚಿನ್ನ ಪದಕ ಗೆಲುವಿನತ್ತ ನೀರಜ್ ಗುರಿ
ಒಂದೇ ಪ್ರಯತ್ನದಲ್ಲಿ ಫೈನಲ್‌ಗೆ ಲಗ್ಗೆಯಿಟ್ಟ ನೀರಜ್
ಶನಿವಾರ ನಡೆಯಲಿರುವ ಫೈನಲ್‌ನತ್ತ ಎಲ್ಲರ ಚಿತ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.