ADVERTISEMENT

Tokyo Olympics: ಟೇಬಲ್ ಟೆನಿಸ್ ಮಹಿಳಾ ಸಿಂಗಲ್ಸ್‌ನಲ್ಲಿ ಮಣಿಕಾ ಬಾತ್ರಾಗೆ ಜಯ

ಡೆಕ್ಕನ್ ಹೆರಾಲ್ಡ್
Published 24 ಜುಲೈ 2021, 9:11 IST
Last Updated 24 ಜುಲೈ 2021, 9:11 IST
ಮಣಿಕಾ ಬಾತ್ರಾ (ಎಎಫ್‌ಪಿ ಚಿತ್ರ)
ಮಣಿಕಾ ಬಾತ್ರಾ (ಎಎಫ್‌ಪಿ ಚಿತ್ರ)   

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ನ ಟೇಬಲ್ ಟೆನಿಸ್ ಪಂದ್ಯದಲ್ಲಿ ಭಾರತದ ಮಣಿಕಾ ಬಾತ್ರಾ ಗೆಲುವು ಸಾಧಿಸಿದ್ದಾರೆ.

ಟೇಬಲ್ ಟೆನ್ನಿಸ್ ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಅವರು ಬ್ರಿಟನ್‌ನ ಟಿನ್–ಟಿನ್ ಹೊ ವಿರುದ್ಧ 11-6, 11-7, 11-10, 11-9 ಸೆಟ್‌ಗಳಿಂದ ಜಯ ಗಳಿಸಿದ್ದಾರೆ.

ಇದಕ್ಕೂ ಮುನ್ನ ಟೇಬಲ್ ಟೆನಿಸ್ ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತಕ್ಕೆ ನಿರಾಸೆಯಾಗಿತ್ತು. ಮಣಿಕಾ ಬಾತ್ರಾ ಹಾಗೂ ಶರತ್ ಕಮಲ್ ಜೋಡಿ ಟೇಬಲ್ ಟೆನಿಸ್ ಮಿಶ್ರ ಡಬಲ್ಸ್ ವಿಭಾಗದ ಪ್ರಿ-ಕ್ವಾರ್ಟರ್‌ಫೈನಲ್ ಹೋರಾಟದಲ್ಲಿ ಮೂರನೇ ಶ್ರೇಯಾಂಕಿತರಾದ ಚೈನೀಸ್ ತೈಪೆಯ ಲಿನ್ ಯೂನ್-ಜು ಹಾಗೂ ಚೆಂಗ್ ಐ-ಚಿಂಗ್ ಜೋಡಿ ವಿರುದ್ಧ ಪರಾಭವಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.