ADVERTISEMENT

Tokyo Olympics: ಕುಸ್ತಿಯಲ್ಲಿ ದೀಪಕ್ ಪುನಿಯಾಗೆ ಕೈತಪ್ಪಿದ ಕಂಚಿನ ಪದಕ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 11:49 IST
Last Updated 5 ಆಗಸ್ಟ್ 2021, 11:49 IST
ದಿಟ್ಟ ಹೋರಾಟ ತೋರಿದ ದೀಪಕ್ ಪುನಿಯಾ
ದಿಟ್ಟ ಹೋರಾಟ ತೋರಿದ ದೀಪಕ್ ಪುನಿಯಾ   

ಚಿಬಾ (ಜಪಾನ್): ಟೋಕಿಯೊ ಒಲಿಂಪಿಕ್ಸ್‌ ಕುಸ್ತಿ ಸ್ಪರ್ಧೆಯಲ್ಲಿ ಪದಕ ಗೆಲ್ಲುವಲ್ಲಿ ದೀಪಕ್ ಪುನಿಯಾ ವಿಫಲರಾಗಿದ್ದಾರೆ.

ಗುರುವಾರ ನಡೆದ 86 ಕೆ.ಜಿ ವಿಭಾಗದ ಕಂಚಿನ ಪದಕಕ್ಕಾಗಿ ಹೋರಾಟದಲ್ಲಿ ದೀಪಕ್ ಪುನಿಯಾ ಸೋಲು ಅನುಭವಿಸಿದರು. ಇದರೊಂದಿಗೆ ಭಾರತದ ಮಗದೊಂದು ಪದಕದ ಆಸೆ ಕಮರಿದೆ.

ಇದನ್ನೂ ಓದಿ:

ಸ್ಯಾನ್ ಮರಿನೋದ ಮೈಲ್ಸ್ ಆಮಿನ್ ವಿರುದ್ಧ ದೀಪಕ್ ದಿಟ್ಟ ಹೋರಾಟವನ್ನೇ ಪ್ರದರ್ಶಿಸಿದ್ದರು. ಅಲ್ಲದೆ ಒಂದು ಹಂತದಲ್ಲಿ 2-1ರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ ಬೌಟ್ ಅಂತ್ಯಗೊಳ್ಳಲು ಇನ್ನೇನು ಕೆಲವೇ ಸೆಕೆಂಡುಗಳಿರುವಾಗ ತಮ್ಮದೇ ತಪ್ಪಿನಿಂದಾಗಿ ಸೋಲಿನ ಆಘಾತ ಎದುರಿಸಬೇಕಾಯಿತು. ಅಂತಿಮವಾಗಿ 2-4ರ ಅಂತರದಲ್ಲಿ ಸೋಲು ಅನುಭವಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.