ADVERTISEMENT

Tokyo Olympics ಕುಸ್ತಿ: ಇತಿಹಾಸ ರಚಿಸಿದ ರವಿಕುಮಾರ್ ದಹಿಯಾ ಫೈನಲ್‌ಗೆ ಲಗ್ಗೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 10:26 IST
Last Updated 4 ಆಗಸ್ಟ್ 2021, 10:26 IST
ರವಿಕುಮಾರ್ ದಹಿಯಾ
ರವಿಕುಮಾರ್ ದಹಿಯಾ   

ಟೋಕಿಯೊ: ಭಾರತದ ಭರವಸೆಯಾಗಿರುವ ಕುಸ್ತಿಪಟು ರವಿಕುಮಾರ್ ದಹಿಯಾ, ಪುರುಷರ 57 ಕೆ.ಜಿ ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಈ ಮೂಲಕ ಇತಿಹಾಸ ರಚಿಸಿರುವ ರವಿಕುಮಾರ್, ಭಾರತಕ್ಕೆ ಮಗದೊಂದು ಪದಕ ಖಾತ್ರಿಪಡಿಸಿದ್ದಾರೆ.

ಬುಧವಾರ ನಡೆದ ಪುರುಷರ 57 ಕೆ.ಜಿ. ಫ್ರಿಸ್ಟೈಲ್ ವಿಭಾಗದ ಸೆಮಿಫೈನಲ್ ಮುಖಾಮುಖಿಯಲ್ಲಿ ರವಿಕುಮಾರ್ ಕಜಕಿಸ್ತಾನದ ನುರಿಸ್ಲಾಮ್ ಸನಾಯೆವ್ ವಿರುದ್ಧ ಗೆಲುವು ದಾಖಲಿಸಿದರು

ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲೇ ಪದಕ ಗೆಲ್ಲುತ್ತಿರುವ ಐದನೇ ಭಾರತೀಯ ಕುಸ್ತಿಪಟು ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಮೂಲಕ ದಿಗ್ಗಜರಾದ ಕೆ.ಡಿ ಜಾಧವ್, ಸುಶೀಲ್ ಕುಮಾರ್, ಯೋಗೇಶ್ವರ್ ದತ್ ಮತ್ತು ಸಾಕ್ಷಿ ಮಲಿಕ್ ಸಾಲಿಗೆ ಸೇರಿದ್ದಾರೆ.

ಅಷ್ಟೇ ಯಾಕೆ ಸುಶೀಲ್ ಕುಮಾರ್ ಬಳಿಕ ಒಲಿಂಪಿಕ್ ಫೈನಲ್‌ಗೆ ಪ್ರವೇಶಿಸಿದ ಭಾರತದ ಎರಡನೇ ಕುಸ್ತಿಪಟು ಎಂಬ ಹಿರಿಮೆಗೂ ಭಾಜನರಾಗಿದ್ದಾರೆ.

ಕೊನೆಯ ಕ್ಷಣದಲ್ಲಿ ಗೆಲುವು...
ಮೊದಲ ರೌಂಡ್‌ನಲ್ಲಿ 0-1 ಹಾಗೂ ದ್ವಿತೀಯ ಸುತ್ತಿನಲ್ಲಿ 2-9ರಲ್ಲಿ ಹಿನ್ನಡೆ ಅನುಭವಿಸಿದ ರವಿಕುಮಾರ್, ಕೊನೆಯ ರೌಂಡ್‌ನಲ್ಲಿ ನಂಬಲಾಗದ ರೀತಿಯಲ್ಲಿ ತಿರುಗೇಟು ನೀಡಿ ಎದುರಾಳಿಯನ್ನು ಮಗುಚಿ ಹಾಕಿದರು. ಈ ಮೂಲಕ ಕೆಚ್ಚೆದೆಯ ಹೋರಾಟ ಪ್ರದರ್ಶಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.