ಟೋಕಿಯೊ: ಭಾರತದ ಭರವಸೆಯಾಗಿರುವ ಕನ್ನಡತಿ ಅದಿತಿ ಅಶೋಕ್, ಒಲಿಂಪಿಕ್ಸ್ ಗಾಲ್ಫ್‌ನಲ್ಲಿ ದೇಶಕ್ಕೆ ಚೊಚ್ಚಲ ಪದಕ ಗೆದ್ದುಕೊಡುವತ್ತ ದಿಟ್ಟ ಹೆಜ್ಜೆಯನ್ನಿರಿಸಿದ್ದಾರೆ.
ಶುಕ್ರವಾರ ಮೂರನೇ ಸುತ್ತಿನ ನಂತರ ಎರಡನೇ ಸ್ಥಾನದಲ್ಲೇ (3 ಅಂಡರ್ ಪಾರ್ 67) ಮುಂದುವರಿದಿದ್ದಾರೆ. ಇದರಿಂದಾಗಿ ಪದಕದ ನಿರೀಕ್ಷೆಯು ಹೆಚ್ಚಿದೆ.
ಇದನ್ನೂ ಓದಿ:ಮಹಿಳಾ ಹಾಕಿ ಟೀಂಗೆ ಪ್ರಧಾನಿ ವಿಡಿಯೊ ಕರೆ; ಕಣ್ಣೀರಾದ ಆಟಗಾರ್ತಿಯರು
23 ವರ್ಷದ ಅದಿತಿ ಎರಡನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.
ಈ ಮಧ್ಯೆ ಭಾರತವನ್ನು ಪ್ರತಿನಿಧಿಸುತ್ತಿರುವ ಗಾಲ್ಫರ್ ದೀಕ್ಷಾ ದಾಗರ್ ಅವರಿಗೆ ಪ್ರಭಾವಿ ಎನಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.