ADVERTISEMENT

ವಿಶ್ವ ಚೆಸ್‌ ಬ್ಲಿಟ್ಜ್‌ ಚಾಂಪಿಯನ್‌ಷಿಪ್‌: ಕಂಚು ಗೆದ್ದ ಭಾರತದ ವೈಶಾಲಿ

ಪಿಟಿಐ
Published 1 ಜನವರಿ 2025, 6:11 IST
Last Updated 1 ಜನವರಿ 2025, 6:11 IST
<div class="paragraphs"><p>ಆರ್‌. ವೈಶಾಲಿ</p></div>

ಆರ್‌. ವೈಶಾಲಿ

   

(ಚಿತ್ರ ಕೃಪೆ: X/@FIDE_chess)

ನ್ಯೂಯಾರ್ಕ್: ಮಹಿಳಾ ವಿಶ್ವ ಬ್ಲಿಟ್ಜ್ (ಅತಿ ವೇಗದ) ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್‌ ಆರ್‌. ವೈಶಾಲಿ, ಕಂಚಿನ ಪದಕ ಗೆದ್ದಿದ್ದಾರೆ.

ADVERTISEMENT

ವಾಲ್‌ಸ್ಟ್ರೀಟ್‌ನಲ್ಲಿ ನಡೆದ ಟೂರ್ನಿಯಲ್ಲಿ ಸೆಮಿಫೈನಲ್‌ನಲ್ಲಿ ಭಾರತದ ವೈಶಾಲಿ, ಚೀನಾದ ಜು ವೆನ್‌ಜುನ್‌ ವಿರುದ್ಧ 0.5-2.5 ಅಂಕಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ.

ಇದರೊಂದಿಗೆ ಫೈನಲ್‌ಗೇರುವ ಅವಕಾಶದಿಂದ ವಂಚಿತರಾದರೂ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಮೊದಲು ಚೀನಾದವರೇ ಆದ ಝು ಜಿನರ್‌ ಅವರನ್ನು 2.5-1.5ರ ಅಂಕಗಳ ಅಂತರದಿಂದ ಮಣಿಸಿದ್ದ ವೈಶಾಲಿ, ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದ್ದರು.

ಈ ವಿಭಾಗದಲ್ಲಿ ಚೀನಾದ ಲೀ ಟಿಂಗ್ಜಿ ಅವರನ್ನು ಮಣಿಸಿದ ಜು ವೆನ್‌ಜುನ್‌ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.

ವೈಶಾಲಿ ಅಮೋಘ ಸಾಧನೆಗೆ ಅಂತರರಾಷ್ಟ್ರೀಯ ಚೆಸ್ ಫೆಡರೇಷನ್ (ಫಿಡೆ) ಉಪಾಧ್ಯಕ್ಷ, ಐದು ಬಾರಿಯ ವಿಶ್ವ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. 'ವೈಶಾಲಿ ಸಾಧನೆಯಲ್ಲಿ ಅತೀವ ಹೆಮ್ಮೆಯಿದೆ' ಎಂದು ತಿಳಿಸಿದ್ದಾರೆ.

ಇದೀಗಷ್ಟೇ ಮಹಿಳಾ ವಿಶ್ವ ರ‍್ಯಾಪಿಡ್‌ ಚೆಸ್ ಚಾಂಪಿಯನ್‌ಷಿಪ್‌‌ನಲ್ಲಿ ಭಾರತದ ಕೊನೇರು ಹಂಪಿ ಕಿರೀಟ ಮುಡಿಗೇರಿಸಿಕೊಂಡಿದ್ದರು. ಆ ಮೂಲಕ 37 ವರ್ಷದ ಕೊನೇರು ಹಂಪಿ ಎರಡನೇ ಸಲ ರ‍್ಯಾಪಿಡ್‌ ಚೆಸ್ ಚಾಂಪಿಯನ್‌ಷಿಪ್‌‌ ಗೆದ್ದ ಸಾಧನೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.