ವಿಯೆಟ್ನಾಂ: ಭಾರತದ ಮಹಿಳಾ ಕುಸ್ತಿಪಟುಗಳು ಇಲ್ಲಿ ನಡೆಯುತ್ತಿರುವ 23 ವರ್ಷದೊಳಗಿನವರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಾಬಲ್ಯ ಮೆರೆದಿದ್ದಾರೆ. ನಾಲ್ಕು ಚಿನ್ನ ಮತ್ತು ಐದು ಬೆಳ್ಳಿ ಸೇರಿದಂತೆ 10 ವಿಭಾಗಗಳಲ್ಲಿ ತಲಾ ಒಂದು ಪದಕವನ್ನು ಗೆಲ್ಲುವ ಮೂಲಕ ತಂಡ ಪ್ರಶಸ್ತಿಯನ್ನು ಗೆದ್ದರು.
ಪ್ರಿಯಾಂಶಿ ಪ್ರಜಾಪತ್ (50 ಕೆ.ಜಿ), ರೀನಾ (55 ಕೆ.ಜಿ), ಸೃಷ್ಟಿ (68 ಕೆ.ಜಿ) ಮತ್ತು ಪ್ರಿಯಾ (76 ಕೆ.ಜಿ) ಚಿನ್ನದ ಪದಕ ಗೆದ್ದರು. ಭಾರತದ ಇನ್ನೂ ಐದು ಮಹಿಳಾ ಕುಸ್ತಿಪಟುಗಳು ಚಿನ್ನದ ಪದಕದ ಸ್ಪರ್ಧೆಗಳಲ್ಲಿ ಸೋತು, ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
ನೇಹಾ ಶರ್ಮಾ (57 ಕೆ.ಜಿ), ತನ್ವಿ (59 ಕೆ.ಜಿ), ಪ್ರಗತಿ (62 ಕೆ.ಜಿ), ಶಿಕ್ಷಾ (65 ಕೆ.ಜಿ), ಮತ್ತು ಜ್ಯೋತಿ ಬೆರ್ವಾಲ್ (72 ಕೆಜಿ) ಬೆಳ್ಳಿ ಪದಕಗಳನ್ನು ಗೆದ್ದರೆ, ಹಿನಾಬೆನ್ ಖಲೀಫಾ (53 ಕೆಜಿ) ಕಂಚಿನ ಪದಕವನ್ನು ಗೆದ್ದರು.
ಗ್ರೀಕೊ-ರೋಮನ್ ಶೈಲಿಯಲ್ಲಿ ಸುಮಿತ್ 63 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದರೆ, ನಿತೇಶ್ (97 ಕೆಜಿ) ಮತ್ತು ಅಂಕಿತ್ ಗುಲಿಯಾ (72 ಕೆಜಿ) ಕಂಚಿನ ಪದಕಗಳನ್ನು ಗೆದ್ದರು.
ಪುರುಷರ ಫ್ರೀಸ್ಟೈಲ್ ಸ್ಪರ್ಧೆಗಳಲ್ಲಿ ವಿಕ್ಕಿ 97 ಕೆ.ಜಿ ವಿಭಾಗದಲ್ಲಿ ಚಿನ್ನ ಗೆದ್ದರು. ನಿಖಿಲ್ (61 ಕೆಜಿ), ಸುಜೀತ್ ಕಲ್ಕಲ್ (65 ಕೆಜಿ), ಜೈದೀಪ್ (74 ಕೆಜಿ), ಚಂದ್ರಮೋಹನ್ (79 ಕೆಜಿ) ಮತ್ತು ಸಚಿನ್ (92 ಕೆಜಿ) ಕೂಡ ಫೈನಲ್ ಪ್ರವೇಶಿಸಿದ್ದು, ಚಿನ್ನಕ್ಕಾಗಿ ಹೋರಾಟ ನಡೆಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.