ADVERTISEMENT

ಮಹಿಳಾ ಏಷ್ಯಾ ಕಪ್ ಹಾಕಿ: ಭಾರತ ತಂಡಕ್ಕೆ ಸಲಿಮಾ ಟೆಟೆ ಸಾರಥ್ಯ

ಪಿಟಿಐ
Published 21 ಆಗಸ್ಟ್ 2025, 13:55 IST
Last Updated 21 ಆಗಸ್ಟ್ 2025, 13:55 IST
<div class="paragraphs"><p>ಹಾಕಿ</p></div>

ಹಾಕಿ

   

ನವದೆಹಲಿ: ಅನುಭವಿ ಮಿಡ್‌ಫೀಲ್ಡರ್ ಸಲಿಮಾ ಟೆಟೆ ಅವರನ್ನು ಏಷ್ಯಾ ಕಪ್‌ ಹಾಕಿ ಟೂರ್ನಿಯಲ್ಲಿ ಆಡುವ ಭಾರತ ಮಹಿಳಾ ತಂಡದ ನಾಯಕಿಯನ್ನಾಗಿ ಮುಂದುವರಿಸಲಾಗಿದೆ. ಈ ಟೂರ್ನಿ ಸೆಪ್ಟೆಂಬರ್‌ 5 ರಿಂದ 14ರವರೆಗೆ ಚೀನಾದ ಹಾಂಗ್‌ಝೌನಲ್ಲಿ ನಡೆಯಲಿದೆ.

ಈ ಟೂರ್ನಿಯಲ್ಲಿ ಚಾಂಪಿಯನ್ ಕಿರೀಟ ಧರಿಸುವ ತಂಡ, ಮುಂದಿನ ವರ್ಷದ ಎಫ್‌ಐಎಚ್‌ ಮಹಿಳಾ ಹಾಕಿ ವಿಶ್ವಕಪ್‌ನಲ್ಲಿ ಆಡುವ ಅರ್ಹತೆ ಪಡೆಯಲಿದೆ.

ADVERTISEMENT

ಭಾರತ ವನಿತೆಯರು ‘ಬಿ’ ಗುಂಪಿನಲ್ಲಿದ್ದು, ಜಪಾನ್‌, ಥಾಯ್ಲೆಂಡ್ ಮತ್ತು ಸಿಂಗಪುರ ತಂಡಗಳ ವಿರುದ್ಧ ಆಡಬೇಕಾಗಿದೆ. ಮೊದಲ ಪಂದ್ಯ ಸೆ. 5ರಂದು ಥಾಯ್ಲೆಂಡ್ ವಿರುದ್ಧ ನಡೆಯಲಿದೆ. 6ರಂದು ಜಪಾನ್‌ ವಿರುದ್ಧ ಮತ್ತು 8ರಂದು ಗುಂಪಿನ ಕೊನೆಯ ಪಂದ್ಯವನ್ನು ಸಿಂಗಪುರ ವಿರುದ್ಧ ಆಡಲಿದೆ.

‘ತಂಡದಲ್ಲಿ ಅನುಭವಿಗಳ ಜೊತೆ ಯುವೋತ್ಸಾಹಿಗಳಿದ್ದು ಸಮತೋಲನ ಹೊಂದಿದೆ’ ಎಂದು ಚೀಫ್‌ ಕೋಚ್‌ ಹರೇಂದ್ರ ಸಿಂಗ್ ಅವರು ಹಾಕಿ ಇಂಡಿಯಾ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‌23  ವರ್ಷದ ಸಲಿಮಾ ಅವರನ್ನು ಕಳೆದ ವರ್ಷ ಮೊದಲ ಬಾರಿ ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿತ್ತು.

20 ಮಂದಿಯ ತಂಡ ಹೀಗಿದೆ:

ಗೋಲ್‌ಕೀಪರ್ಸ್‌: ಬನ್ಸಾರಿ ಸೋಲಂಕಿ, ಬಿಚು ದೇವಿ ಕರಿಬಮ್, ಡಿಫೆಂಡರ್ಸ್: ಮನಿಶಾ ಚೌಹಾನ್‌, ಉದಿತಾ, ಜ್ಯೋತಿ, ಸುಮನ್‌ ದೇವಿ, ನಿಕ್ಕಿ ಪ್ರಧಾನ್‌, ಇಶಿಕಾ ಚೌಧರಿ.

ಮಿಡ್‌ಫೀಲ್ಡರ್ಸ್‌: ನೇಹಾ, ವೈಷ್ಣವಿ ವಿಠ್ಠಲ್ ಫಾಲ್ಕೆ, ಸಲಿಮಾ ಟೆಟೆ, ಶರ್ಮಿಳಾ ದೇವಿ, ಲಾಲ್ರೆಮ್‌ಸಿಯಾಮಿ, ಸುನೆಲಿಟಾ ಟೊಪ್ಪೊ. ಫಾರ್ವರ್ಡ್ಸ್‌: ನವನೀತ್ ಕೌರ್‌, ರುತುಜಾ ದಾದಾಸೊ ಪಿಸಾಳ್, ಬ್ಯೂಟಿ ಡಂಗ್ಡಂಗ್‌, ಮುಮ್ತಾಜ್‌ ಖಾನ್‌, ದೀಪಿಕಾ ಮತ್ತು ಸಂಗೀತಾ ಕುಮಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.