ADVERTISEMENT

ಮಹಿಳಾ ಜೂನಿಯರ್ ಹಾಕಿ ವಿಶ್ವಕಪ್‌: ಭಾರತ ತಂಡಕ್ಕೆ ಜ್ಯೋತಿ ಸಾರಥ್ಯ

ಪಿಟಿಐ
Published 10 ನವೆಂಬರ್ 2025, 12:43 IST
Last Updated 10 ನವೆಂಬರ್ 2025, 12:43 IST
ಜ್ಯೋತಿ ಸಿಂಗ್‌
ಜ್ಯೋತಿ ಸಿಂಗ್‌   

ನವದೆಹಲಿ: ಜ್ಯೋತಿ ಸಿಂಗ್ ಅವರು ಇದೇ 25ರಿಂದ ಡಿಸೆಂಬರ್‌ 13ರವರೆಗೆ ಚಿಲಿಯ ಸ್ಯಾಂಟಿಯಾಗೊದಲ್ಲಿ ನಡೆಯಲಿರುವ ಎಫ್‌ಐಎಚ್ ಮಹಿಳಾ ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ವಿಶ್ವಕಪ್‌ಪ್‌ಗೆ 20 ಆಟಗಾರ್ತಿಯರ ತಂಡವನ್ನು ಹಾಕಿ ಇಂಡಿಯಾ ಸೋಮವಾರ ಪ್ರಕಟಿಸಿದೆ. ಅದರಲ್ಲಿ ಇಬ್ಬರು ಬದಲಿ ಆಟಗಾರ್ತಿಯರು ಸೇರಿದ್ದಾರೆ. ಮಾಜಿ ಅಂತರರಾಷ್ಟ್ರೀಯ ಆಟಗಾರ ತುಷಾರ್ ಖಾಂಡ್ಕರ್ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ. 

ಭಾರತ ತಂಡವು ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಡಿಸೆಂಬರ್ 1ರಂದು ನಮೀಬಿಯಾ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದೆ. ಡಿ.3ರಂದು ಜರ್ಮನಿ ಮತ್ತು ಡಿ.5ರಂದು ಐರ್ಲೆಂಡ್ ವಿರುದ್ಧದ ಪಂದ್ಯಗಳನ್ನು ಆಡಲಿದೆ. ಪ್ರತಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು ಡಿ.7ರಿಂದ 13ರವರೆಗೆ ನಡೆಯಲಿರುವ ನಾಕೌಟ್ ಹಂತಗಳಿಗೆ ಮುನ್ನಡೆಯಲಿವೆ. 

ADVERTISEMENT

ತಂಡ ಹೀಗಿದೆ: ಗೋಲ್‌ಕೀಪರ್‌ಗಳು: ನಿಧಿ, ಎಂಜಿಲ್ ಹರ್ಷರಾಣಿ ಮಿಂಜ್; 

ಡಿಫೆಂಡರ್‌ಗಳು: ಮನೀಶಾ, ಲಾಲ್‌ ತನ್ಲುಅಲಂಗಿ, ಸಾಕ್ಷಿ ಶುಕ್ಲಾ, ಪೂಜಾ ಸಾಹೂ, ನಂದಿನಿ;

ಮಿಡ್‌ಫೀಲ್ಡರ್‌ಗಳು: ಸಾಕ್ಷಿ ರಾಣಾ, ಇಶಿಕಾ, ಸುನೆಲಿಟಾ ಟೊಪ್ಪೊ, ಜ್ಯೋತಿ ಸಿಂಗ್, ಖೈದಂ ಶಿಲೇಮಾ ಚಾನು, ಬಿನಿಮಾ ಧಾನ್;

ಫಾರ್ವರ್ಡ್‌ಗಳು:  ಸೋನಮ್, ಪೂರ್ಣಿಮಾ ಯಾದವ್, ಕನಿಕಾ ಸಿವಾಚ್, ಹಿನಾ ಬಾನೊ, ಸುಖವೀರ್ ಕೌರ್;

ಬದಲಿ ಆಟಗಾರ್ತಿಯರು: ಪ್ರಿಯಾಂಕ ಯಾದವ್‌, ಪಾರ್ವತಿ ಟೊಪ್ನೊ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.