ADVERTISEMENT

World Boxing Championships: ಮೀನಾಕ್ಷಿಗೆ ಪದಕ,ಬರಿಗೈಯಲ್ಲಿ ಮರಳಿದ ಪುರುಷರ ತಂಡ

ಪಿಟಿಐ
Published 12 ಸೆಪ್ಟೆಂಬರ್ 2025, 14:02 IST
Last Updated 12 ಸೆಪ್ಟೆಂಬರ್ 2025, 14:02 IST
<div class="paragraphs"><p>ಸೆಮಿಫೈನಲ್‌ ತಲುಪಿದ ಮೀನಾಕ್ಷಿ ಹೂಡಾ ಅವರು ಕೋಚ್‌ ಸಿಬ್ಬಂದಿಯೊಂದಿಗೆ ಸಂಭ್ರಮಿಸಿದರು</p></div>

ಸೆಮಿಫೈನಲ್‌ ತಲುಪಿದ ಮೀನಾಕ್ಷಿ ಹೂಡಾ ಅವರು ಕೋಚ್‌ ಸಿಬ್ಬಂದಿಯೊಂದಿಗೆ ಸಂಭ್ರಮಿಸಿದರು

   

ಲಿವರ್‌ಪೂಲ್‌: ಭಾರತದ ಮೀನಾಕ್ಷಿ ಹೂಡಾ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಸೆಮಿಫೈನಲ್‌ ಪ್ರವೇಶಿಸಿದರು. ಈ ಮೂಲಕ ಭಾರತಕ್ಕೆ ಮತ್ತೊಂದು ಪದಕ ಖಚಿತಪಡಿಸಿದರು. ಆದರೆ, ಪುರುಷರು 12 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬರಿಗೈಲಿ ವಾಪಸಾದರು.

ಮಹಿಳೆಯರ 48 ಕೆ.ಜಿ. ವಿಭಾಗದಲ್ಲಿ ಕಣಕ್ಕಿಳಿದಿರುವ ಮೀನಾಕ್ಷಿ ಅವರು, ಎಂಟರ ಘಟ್ಟದ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ನ ಅಲೈಸ್‌ ಪಂಫ್ರೆ ಅವರನ್ನು 5–0ಯಿಂದ ಸುಲಭವಾಗಿ ಮಣಿಸಿದರು.

ADVERTISEMENT

ಅದರೊಂದಿಗೆ, ಕೂಟದಲ್ಲಿ ಈಗಾಗಲೇ ಸೆಮಿಫೈನಲ್‌ ತಲುಪಿರುವ ಜಾಸ್ಮಿನ್‌ (57 ಕೆ.ಜಿ.), ನೂಪುರ್ ಶೆವೊರಾನ್ (80+ ಕೆ.ಜಿ.) ಹಾಗೂ ಪೂಜಾ ರಾಣಿ (80 ಕೆ.ಜಿ.) ಅವರ ಸಾಲಿಗೆ ಮೀನಾಕ್ಷಿ ಸೇರಿಕೊಂಡರು.

ಮೀನಾಕ್ಷಿ ಅವರು ಅಂತಿಮ ನಾಲ್ಕರ ಸುತ್ತಿನಲ್ಲಿ 2023ರ ಬೆಳ್ಳಿ ಪದಕ ವಿಜೇತ ಮಂಗೋಲಿಯಾದ ಲೂತ್ಸೈಖನಿ ಅಲ್ತಾಂತ್‌ಸೆಟ್ಸೆಗ್‌ ಅವರ ಸವಾಲು ಎದುರಿಸಲಿದ್ದಾರೆ.

ಪುರುಷರು ಬರಿಗೈಲಿ ವಾಪಸ್‌:

ಸ್ಪರ್ಧೆಯಲ್ಲುಳಿದಿದ್ದ ಭಾರತದ ಏಕೈಕ ಪುರುಷ ಬಾಕ್ಸರ್‌ ಜಾದುಮಣಿ ಸಿಂಗ್‌ ಅವರು 50 ಕೆ.ಜಿ. ವಿಭಾಗದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಸಂಝಾರ್‌ ತಾಷ್ಕೆಂಬೆ (ಕಜಾಕಸ್ತಾನ) ವಿರುದ್ಧ 0–4ರಿಂದ ಪರಾಭವಗೊಂಡರು. ಅದರೊಂದಿಗೆ, ಟೂರ್ನಿಯಲ್ಲಿ ಭಾಗವಹಿಸಿದ್ದ ಭಾರತದ 10 ಪುರುಷ ಬಾಕ್ಸರ್‌ಗಳು ಪದಕ ಗೆಲ್ಲದೆ ಅಭಿಯಾನ ಮುಗಿಸಬೇಕಾಯಿತು.

ಭಾರತದ ಪುರುಷರು 2013ರ ನಂತರ ಇದೇ ಮೊದಲ ಬಾರಿಗೆ ಪದಕ ಶೂನ್ಯವಾಗಿ ತವರಿಗೆ ಮರಳಿದರು.

ಮೀನಾಕ್ಷಿ ಹೂಡಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.