ADVERTISEMENT

ಎಟಿಪಿ ರ‍್ಯಾಂಕಿಂಗ್‌: ಅಗ್ರ 10ರೊಳಗೆ ಬೆರೆಟ್ಟಿನಿ

ಏಜೆನ್ಸೀಸ್
Published 29 ಅಕ್ಟೋಬರ್ 2019, 4:49 IST
Last Updated 29 ಅಕ್ಟೋಬರ್ 2019, 4:49 IST
   

ಪ್ಯಾರಿಸ್‌ : ಇಟಲಿಯ ಮ್ಯಾಟ್ಟೆಯೊ ಬೆರೆಟ್ಟಿನಿ ಅವರು ಎಟಿಪಿ ರ‍್ಯಾಂಕಿಂಗ್‌ನಲ್ಲಿ ಮೊದಲ ಬಾರಿ ಅಗ್ರ 10ರೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರ ಪ್ರಕಟವಾದ ವಿಶ್ವ ಕ್ರಮಾಂಕದಲ್ಲಿ ಅವರಿಗೆ ಒಂಬತ್ತನೇ ಸ್ಥಾನ ಲಭಿಸಿದೆ.

ಹೋದ ವಾರ ವಿಯೆನ್ನಾ ಓಪನ್‌ ಟೂರ್ನಿಯಲ್ಲಿ ಸೆಮಿಫೈನಲ್‌ ತಲುಪಿದ್ದ 23 ವರ್ಷದ ಬೆರೆಟ್ಟಿನಿ, ಡೊಮಿನಿಕ್‌ ಥೀಮ್‌ ಎದುರು ಮುಗ್ಗರಿಸಿದ್ದರು.

ಕಳೆದ ವರ್ಷ 53ನೇ ರ‍್ಯಾಂಕಿಂಗ್‌ನಲ್ಲಿದ್ದ ಅವರು ಈಗ ಗಮನಾರ್ಹ ಏರಿಕೆ ಕಂಡಿದ್ದಾರೆ. ಬುಡಾಪೆಸ್ಟ್‌ ಹಾಗೂ ಸ್ಟುಟ್‌ಗಾರ್ಟ್‌ ಓಪನ್‌ ಟೂರ್ನಿಗಳಲ್ಲಿ ಚಾಂಪಿಯನ್‌ ಪಟ್ಟ ಧರಿಸಿದ್ದ ಇಟಲಿಯ ಆಟಗಾರ ಅಮೆರಿಕ ಓಪನ್‌ನಲ್ಲಿ ಸೆಮಿಫೈನಲ್‌ವರೆಗೂ ಕಾಲಿಟ್ಟಿದ್ದರು. ಆದರೆ ರಫೆಲ್‌ ನಡಾಲ್‌ ಎದುರು ನಿರಾಸೆ ಕಂಡಿದ್ದರು.

ADVERTISEMENT

ಈ ವಾರ ನಡೆಯುವ ಆರಂಭ ವಾಗುವ ಪ್ಯಾರಿಸ್‌ ಮಾಸ್ಟರ್ಸ್‌ ಟೂರ್ನಿ ಯಲ್ಲಿ ಬೆರೆಟ್ಟಿನಿ ಫೈನಲ್‌ ತಲುಪಿದರೆ, ವರ್ಷಾಂತ್ಯದಲ್ಲಿ ನಡೆಯುವ ಎಟಿಪಿ ಫೈನಲ್ಸ್‌ಗೆ ಪ್ರವೇಶ ಪಡೆಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.