ADVERTISEMENT

ಭಾರತ ತಂಡಕ್ಕೆ ಮರಳಿದ ಪೇಸ್

ಪಿಟಿಐ
Published 26 ಅಕ್ಟೋಬರ್ 2019, 19:01 IST
Last Updated 26 ಅಕ್ಟೋಬರ್ 2019, 19:01 IST
ಲಿಯಾಂಡರ್ ಪೇಸ್
ಲಿಯಾಂಡರ್ ಪೇಸ್    

ನವದೆಹಲಿ: ಅನುಭವಿ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಅವರು ಒಂದು ವರ್ಷದ ನಂತರ ಭಾರತ ಡೇವಿಸ್ ಕಪ್ ತಂಡಕ್ಕೆ ಮರಳಲಿದ್ದಾರೆ.

2018ರ ಏಪ್ರಿಲ್ ನಂತರ ಅವರು ತಂಡದಲ್ಲಿ ಆಡಿರಲಿಲ್ಲ. ಇದೀಗ ದೀರ್ಘ ವಿಶ್ರಾಂತಿಯ ನಂತರ ಮರಳಿದ್ದಾರೆ. ಅವರು ಮುಂಬರಲಿರುವ ಪಾಕಿಸ್ತಾನ ಎದುರಿನ ಡೇವಿಸ್ ಕಪ್‌ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದೆ. ಆದರೆ,ಭಾರತ ತಂಡವು ಪಾಕ್‌ಗೆ ಹೋಗಲು ನಿರಾಕರಿಸಿದ್ದು, ತಟಸ್ಥ ಸ್ಥಳದಲ್ಲಿ ಆಯೋಜಿಸುವ ಬಗ್ಗೆ ವಿಶ್ವ ಟೆನಿಸ್ ಫೆಡರೇಷನ್ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT