ADVERTISEMENT

ಎಟಿಪಿ ರ‍್ಯಾಂಕಿಂಗ್‌: ಅಗ್ರ 100ರೊಳಗೆ ರಾಮ್‌ಕುಮಾರ್‌

ಪಿಟಿಐ
Published 7 ಫೆಬ್ರುವರಿ 2022, 13:01 IST
Last Updated 7 ಫೆಬ್ರುವರಿ 2022, 13:01 IST
ರಾಮ್‌ಕುಮಾರ್ ರಾಮನಾಥನ್‌– ಪಿಟಿಐ ಚಿತ್ರ
ರಾಮ್‌ಕುಮಾರ್ ರಾಮನಾಥನ್‌– ಪಿಟಿಐ ಚಿತ್ರ   

ನವದೆಹಲಿ: ಟಾಟಾ ಓಪನ್‌ ಮಹಾರಾಷ್ಟ್ರ ಟೆನಿಸ್‌ ಟೂರ್ನಿಯ ಡಬಲ್ಸ್ ಪ್ರಶಸ್ತಿ ವಿಜೇತ, ಭಾರತದ ರಾಮ್‌ಕುಮಾರ್ ರಾಮನಾಥನ್ ಅವರು ಮೊದಲ ಬಾರಿ ಎಟಿಪಿ ರ‍್ಯಾಂಕಿಂಗ್‌ನಲ್ಲಿ ಮೊದಲ ಬಾರಿಗೆ ಅಗ್ರ 100 ಪಟ್ಟಿಯೊಳಗೆ ಪ್ರವೇಶಿಸಿದ್ದಾರೆ.

ಸಹ ಆಟಗಾರ ರೋಹನ್ ಬೋಪಣ್ಣ ಜೊತೆಗೂಡಿ ಪ್ರಶಸ್ತಿ ಗೆದ್ದುಕೊಂಡಿದ್ದ ರಾಮನಾಥನ್‌, ಡಬಲ್ಸ್ ವಿಭಾಗದಲ್ಲಿ ಸದ್ಯ 94ನೇ ಸ್ಥಾನದಲ್ಲಿದ್ದಾರೆ. ಅವರು 14 ಸ್ಥಾನಗಳ ಬಡ್ತಿ ಪಡೆದಿದ್ದಾರೆ. ಬೋಪಣ್ಣ ಅವರೂ ಎಂಟು ಸ್ಥಾನಗಳಷ್ಟು ಏರಿಕೆ ಕಂಡಿದ್ದು, ಸದ್ಯ 35ನೇ ಸ್ಥಾನದಲ್ಲಿದ್ದಾರೆ.

ಟಾಟಾ ಓಪನ್ ಟ್ರೋಫಿ ಜಯದ ಮೂಲಕ ಇವರಿಬ್ಬರೂ 250 ಎಟಿಪಿ ಪಾಯಿಂಟ್ಸ್ ಕಲೆಹಾಕಿದ್ದರು. ದಿವಿಜ್‌ ಶರಣ್‌ ಒಂದು ಸ್ಥಾನ ಬಡ್ತಿ ಪಡೆದಿದ್ದು, 134ನೇ ಸ್ಥಾನದಲ್ಲಿದ್ದಾರೆ.

ADVERTISEMENT

ಭಾರತದವರ ಪೈಕಿರಾಮ್‌ಕುಮಾರ್ ಅವರು ಸಿಂಗಲ್ಸ್ ವಿಭಾಗದಲ್ಲೂ ಅತಿ ಹೆಚ್ಚಿನ ರ‍್ಯಾಂಕಿಂಗ್ ಹೊಂದಿದ್ದಾರೆ. ಸದ್ಯ ಅವರು 185ನೇ ಸ್ಥಾನದಲ್ಲಿದ್ದಾರೆ. ಸುಮಿತ್ ನಗಾಲ್‌ (217, +5), ಪ್ರಜ್ಞೇಶ್ ಗುಣೇಶ್ವರನ್‌ (235, –7) ಮತ್ತು ಮುಕುಂದ್‌ ಶಶಿಕುಮಾರ್‌ (334) ಏರಿಳಿತ ಕಂಡಿದ್ದಾರೆ. ಯೂಕಿ ಭಾಂಬ್ರಿ 670ನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.