
ಟೆನಿಸ್
ನವದೆಹಲಿ: ಭರವಸೆ ಮೂಡಿಸಿರುವ ಆಟಗಾರ್ತಿ ವೈಷ್ಣವಿ ಅಡ್ಕರ್ ಅವರನ್ನು ಬಿಲ್ಲೀ ಜೀನ್ ಕಿಂಗ್ ಕಪ್ ಏಷ್ಯಾ/ ಒಷಾನಿಯಾ ಒಂದನೇ ಗುಂಪಿನನಲ್ಲಿ ಆಡಲಿರುವ ಭಾರತ ಟೆನಿಸ್ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಈ ಟೂರ್ನಿಯು ನವದೆಹಲಿ ಯಲ್ಲಿ ಏಪ್ರಿಲ್ 6ರಿಂದ ನಡೆಯಲಿದೆ.
21 ವರ್ಷ ವಯಸ್ಸಿನ ವೈಷ್ಣವಿ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಐಟಿಎಫ್ ಡಬ್ಲ್ಯು 100 ಟೂರ್ನಿಯ ಫೈನಲ್ ತಲುಪಿದ ಭಾರತದ ಮೊದಲ ಆಟಗಾರ್ತಿ ಎನಿಸಿದ್ದರು.
ಅನುಭವಿಗಳಾದ ಸಹಜಾ ಯಮಲಪಲ್ಲಿ, ಶ್ರೀವಲ್ಲಿ ರಷ್ಮಿಕಾ ಭಮಿಡಿಪಾಟಿ, ಋತುಜಾ ಭೋಸಲೆ ಮತ್ತು ಅಂಕಿತಾ ರೈನಾ ಅವರು ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ವೈದೇಹಿ ಚೌಧರಿ ಮೀಸಲು ಆಟಗಾರ್ತಿಯಾಗಿದ್ದಾರೆ. ವಿಶಾಲ್ ಉಪ್ಪಲ್ ಅವರು ನಾಯಕರಾಗಿದ್ದು, ರಾಧಿಕಾ ಕಾನಿಟ್ಕರ್ ಅವರು ಭಾರತ ತಂಡದ ಕೋಚ್ ಆಗಿದ್ದಾರೆ ಎಂದು ಅಖಿಲ ಭಾರತ ಟೆನಿಸ್ ಸಂಸ್ಥೆ ತಿಳಿಸಿದೆ.
ಬೆಂಗಳೂರಿನಲ್ಲಿ ನಡೆದ ಬಿಲ್ಲೀ ಜೀನ್ ಕಿಂಗ್ ಕಪ್ ಪ್ಲೇ ಆಫ್‌ನಲ್ಲಿ ನೆದರ್ಲೆಂಡ್ಸ್ ಮತ್ತು ಸ್ಲೊವೇನಿಯಾ ತಂಡಗಳು ಭಾರತ ತಂಡವನ್ನು ಸೋಲಿಸಿದ್ದವು. ಹೀಗಾಗಿ ಭಾರತ ಏಷ್ಯಾ/ ಒಷಾನಿಯಾ ವಲಯದಿಂದ ಅಭಿಯಾನ ಆರಂಭಿಸಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.