ಟೆನಿಸ್
ಬೆಂಗಳೂರು: ವರ್ಲ್ಡ್ ಟೆನಿಸ್ ಲೀಗ್ (WTL) ತನ್ನ ಭಾರತದ ಮೊದಲ ಆವೃತ್ತಿಗೆ ಸಂಬಂಧಿಸಿದಂತೆ ಫಾರ್ಮ್ಯಾಟ್, ವೇಳಾಪಟ್ಟಿ ಮತ್ತು ಟಿಕೆಟ್ ವಿವರಗಳನ್ನು ಪ್ರಕಟಿಸಿದೆ.
ಡಿಸೆಂಬರ್ 17ರಿಂದ 20ರವರೆಗೆ ಬೆಂಗಳೂರಿನ ಎಸ್‌ಎಂ ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಟೂರ್ನಮೆಂಟ್ ಭಾರತ ಹಾಗೂ ಜಗತ್ತಿನ ಟೆನಿಸ್ ಅಭಿಮಾನಿಗಳಿಗೆ ಉತ್ಸಾಹಭರಿತ ಕ್ರೀಡಾ ಅನುಭವ ನೀಡಲಿದೆ.
2025ರ ವರ್ಲ್ಡ್ ಟೆನಿಸ್ ಲೀಗ್ ನಾಲ್ಕು ಸೆಟ್‌ಗಳಲ್ಲಿ ನಡೆಯಲಿದ್ದು ಪುರುಷರ ಸಿಂಗಲ್ಸ್, ಮಹಿಳೆಯರ ಸಿಂಗಲ್ಸ್ ಮತ್ತು ಎರಡು ಡಬಲ್ಸ್ ಸೆಟ್‌ಗಳನ್ನು ಒಳಗೊಂಡಿರುತ್ತದೆ. ಪಂದ್ಯಕ್ಕೂ ಮುನ್ನ ಟಾಸ್ ಗೆದ್ದ ನಾಯಕರು ಡಬಲ್ಸ್ ಸಂಯೋಜನೆಯನ್ನು ಆಯ್ಕೆ ಮಾಡುವ ಅವಕಾಶ ಹೊಂದಿರುತ್ತಾರೆ. ಹೆಚ್ಚು ಗೇಮ್‌ಗಳನ್ನು ಗೆಲ್ಲುವ ತಂಡವೇ ಟೈನಲ್ಲಿ ಗೆಲುವು ಸಾಧಿಸುತ್ತದೆ.
ಲೀಗ್ ಹಂತದಲ್ಲಿ ಎಲ್ಲಾ ತಂಡಗಳು ಪರಸ್ಪರ ಒಂದೊಂದು ಬಾರಿ ಮುಖಾಮುಖಿಯಾಗಲಿದ್ದು, ಅಗ್ರ ಎರಡೂ ತಂಡಗಳು ಫೈನಲ್‌ಗೆ ತಲುಪುತ್ತವೆ. ಪ್ರತಿದಿನ ಎರಡು ಟೈಗಳು ನಡೆಯುತ್ತವೆ ಮತ್ತು ನಾಲ್ಕು ದಿನಗಳ ಕಾಲ ಸ್ಪರ್ಧೆಗಳು ನಿರಂತರವಾಗಿ ನಡೆಯಲಿವೆ.
ಪಂದ್ಯಗಳ ವೇಳಾಪಟ್ಟಿ...
ಡಿಸೆಂಬರ್ 17
• ಪಂದ್ಯ 1: VB ರಿಯಾಲ್ಟಿ ಹಾಕ್ಸ್ vs ಅಸ್ಸಿ ಮ್ಯಾವೆರಿಕ್ಸ್ ಕೈಟ್ಸ್
• ಪಂದ್ಯ 2: AOS ಈಗಲ್ಸ್ vs ಗೇಮ್ ಚೇಂಜರ್ಸ್ ಫಾಲ್ಕನ್ಸ್
ಡಿಸೆಂಬರ್ 18
• ಪಂದ್ಯ 1: ಅಸ್ಸಿ ಮ್ಯಾವೆರಿಕ್ಸ್ ಕೈಟ್ಸ್ vs AOS ಈಗಲ್ಸ್
• ಪಂದ್ಯ 2: ಗೇಮ್ ಚೇಂಜರ್ಸ್ ಫಾಲ್ಕನ್ಸ್ vs VB ರಿಯಾಲ್ಟಿ ಹಾಕ್ಸ್
ಡಿಸೆಂಬರ್ 19
• ಪಂದ್ಯ 1: AOS ಈಗಲ್ಸ್ vs VB ರಿಯಾಲ್ಟಿ ಹಾಕ್ಸ್
• ಪಂದ್ಯ 2: ಗೇಮ್ ಚೇಂಜರ್ಸ್ ಫಾಲ್ಕನ್ಸ್ vs ಅಸ್ಸಿ ಮ್ಯಾವೆರಿಕ್ಸ್ ಕೈಟ್ಸ್
ಡಿಸೆಂಬರ್ 20
• ಫೈನಲ್ ಪಂದ್ಯ
ಈ ಟೂರ್ನಿಯಲ್ಲಿ ಮೆಡ್ವೆಡೇವ್, ಬೋಪಣ್ಣ, ಶಪೋವಲೋವ್ ಹಾಗೂ ಸ್ವಿಟೋಲಿನಾ ಮುಂತಾದ ತಾರೆಗಳು ಕಣಕ್ಕಿಳಿಯಲಿದ್ದಾರೆ.
ಡಿಸೆಂಬರ್ 20ರಂದು ಗ್ರ್ಯಾಂಡ್ ಫೈನಲ್ ನಡೆಯಲಿದೆ.
ಲೀಗ್‌ನ ಅಧಿಕೃತ ಟಿಕೆಟ್ ಪಾಲುದಾರ ‘ಬುಕ್ ಮೈ ಶೋ’ ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಈಗ ಟಿಕ್‌ಟ್‌ಗಳು ದೊರೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.