ADVERTISEMENT

AI Jobs | ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿನ ನೇಮಕಾತಿ ಶೇ 25ರಷ್ಟು ಏರಿಕೆ

ಪಿಟಿಐ
Published 2 ಜೂನ್ 2025, 14:28 IST
Last Updated 2 ಜೂನ್ 2025, 14:28 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕೃತಕ ಬುದ್ಧಿಮತ್ತೆ ಮತ್ತು ಮಷಿನ್ ಲರ್ನಿಂಗ್ (ಎ.ಐ ಆ್ಯಂಡ್‌ ಎಂ.ಎಲ್‌) ವಲಯದಲ್ಲಿನ ನೇಮಕಾತಿಯು ಮೇ ತಿಂಗಳಲ್ಲಿ ಶೇ 25ರಷ್ಟು ಏರಿಕೆಯಾಗಿದೆ ಎಂದು ನೌಕರಿ ಡಾಟ್‌ ಕಾಂ ವರದಿ ಸೋಮವಾರ ತಿಳಿಸಿದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ನೇಮಕಾತಿಯು ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಶೇ 5ರಷ್ಟು ಇಳಿಕೆಯಾಗಿದೆ ಎಂದು ತಿಳಿಸಿದೆ.

ರಿಯಲ್‌ ಎಸ್ಟೇಟ್‌ ಮತ್ತು ವಿಮಾ ಕ್ಷೇತ್ರದಲ್ಲಿ ನೇಮಕಾತಿಯು ಕ್ರಮವಾಗಿ ಶೇ 5 ಮತ್ತು ಶೇ 6ರಷ್ಟು ಏರಿಕೆಯಾಗಿದೆ. ಚಿಲ್ಲರೆ, ದೂರಸಂಪರ್ಕ/ಐಎಸ್‌ಪಿ, ಬ್ಯಾಂಕಿಂಗ್‌, ಹಣಕಾಸು ಕ್ಷೇತ್ರದಲ್ಲಿ ಶೇ 8ರಿಂದ ಶೇ 9ರಷ್ಟು ಇಳಿದಿದೆ. ಹೈದರಾಬಾದ್‌ ಮತ್ತು ಕೊಚ್ಚಿಯಲ್ಲಿ ನೇಮಕಾತಿಯು ಕ್ರಮವಾಗಿ ಶೇ 7 ಮತ್ತು ಶೇ 8ರಷ್ಟು ಬೆಳವಣಿಗೆ ಕಂಡಿದೆ ಎಂದು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.