ADVERTISEMENT

Cloudflare Outage: ಚಾಟ್‌ಜಿಪಿಟಿ ಸಹಿತ ಜಾಗತಿಕವಾಗಿ ಇಂಟರ್‌ನೆಟ್ ಸೇವೆ ಸ್ಥಗಿತ

ಪಿಟಿಐ
Published 18 ನವೆಂಬರ್ 2025, 15:48 IST
Last Updated 18 ನವೆಂಬರ್ 2025, 15:48 IST
   

ನವದೆಹಲಿ: ಜಾಗತಿಕವಾಗಿ ಇಂದು (ಮಂಗಳವಾರ) ಡಿಜಿಟಲ್ ವೇದಿಕೆಗಳ ಇಂಟೆರ್‌ನೆಟ್ ಸೇವೆಯಲ್ಲಿ ಭಾರಿ ವ್ಯತಯ ಉಂಟಾಗಿದೆ.

'ಕ್ಲೌಡ್‌ಫ್ಲೇರ್' ಸರ್ವರ್ ಸಮಸ್ಯೆಯಿಂದಾಗಿ ಜನಪ್ರಿಯ ಎಐ ಚಾಟ್ ಬಾಟ್ ವೇದಿಕೆಗಳಾದ ಚಾಟ್‌ಜಿಪಿಟಿ, ಪರ್ಪ್ಲೆಕ್ಸಿಟಿ ಜೊತೆಗೆ ಎಕ್ಸ್, ಕ್ಯಾನ್ವ, ಗೂಗಲ್ ಕ್ಲೌಡ್ ಸೇರಿದಂತೆ ಪ್ರಮುಖ ಫ್ಲಾಟ್‌ಫಾರ್ಮ್‌ಗಳಲ್ಲಿ ಇಂಟರ್‌ನೆಟ್ ಸೇವೆಯಲ್ಲಿ ಸ್ಥಗಿತ ಉಂಟಾಗಿದೆ.

ಈ ಕುರಿತು ಬಳಕೆದಾರರು ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ADVERTISEMENT

ಜನಪ್ರಿಯ ಗೇಮಿಂಗ್ ವೆಬ್‌ಸೈಟ್ ಆದ ಲೀಗ್ ಆಫ್ ಲೆಜೆಂಡ್ಸ್ ಮತ್ತು ಲ್ಯಾಲೊರಂಟ್‌ನಲ್ಲೂ ಅಡಟಣೆ ಉಂಟಾಗಿದೆ.

ಇಂಟರ್‌ನೆಟ್ ಮೂಲಸೌಕರ್ಯ ಕಂಪನಿಯಾದ ಕ್ಲೌಡ್‌ಫ್ಲೇರ್‌ನಲ್ಲಿ ಉಂಟಾದ ನೆಟ್‌ವರ್ಕ್ ವೈಫಲ್ಯದಿಂದ ಈ ದೋಷ ಕಂಡುಬಂದಿದೆ ಎಂದು ತಿಳಿದು ಬಂದಿದೆ.

ಡೌನ್‌ಡಿಟೆಕ್ಟರ್ ಪ್ರಕಾರ, ಜಾಗತಿಕವಾಗಿ 10 ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಈ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ಮೀಮ್ಸ್‌ಗಳು ಹರಿದಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.