ADVERTISEMENT

ಗ್ಯಾಜೆಟ್ ಮಾರುಕಟ್ಟೆ ಪ್ರವೇಶಿಸಿದ ಕ್ರಾಸ್‌ಬೀಟ್ಸ್ ಸ್ಮಾರ್ಟ್‌ವಾಚ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಮೇ 2022, 12:53 IST
Last Updated 6 ಮೇ 2022, 12:53 IST
ಕ್ರಾಸ್‌ಬೀಟ್ಸ್ ಸ್ಮಾರ್ಟ್‌ವಾಚ್
ಕ್ರಾಸ್‌ಬೀಟ್ಸ್ ಸ್ಮಾರ್ಟ್‌ವಾಚ್   

ಬೆಂಗಳೂರು: ದೇಶದ ಯುವಜನತೆಯನ್ನು ಗಮನದಲ್ಲಿರಿಸಿಕೊಂಡು ಕ್ರಾಸ್‌ಬೀಟ್ಸ್ ನೂತನ ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಿದೆ.

ಇಗ್ನೈಟ್ ಲೈಟ್ ಹೆಸರಿನ ಸ್ಟೈಲಿಶ್ ಸ್ಮಾರ್ಟ್‌ವಾಚ್ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಆಕರ್ಷಕ ವಿನ್ಯಾಸದ ಜತೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರಿಗೆ ಸೂಕ್ತ ಎಂದು ಕಂಪನಿ ಹೇಳಿದೆ.

1.69 ಇಂಚಿನ ಡಿಸ್‌ಪ್ಲೇ, 40 ಗ್ರಾಂ ತೂಕ ಹೊಂದಿರುವ ಇಗ್ನೈಟ್ ಲೈಟ್ ಸ್ಮಾರ್ಟ್‌ವಾಚ್, ಥಿಯೇಟರ್ ಮತ್ತು ಡಿಎನ್‌ಡಿ ಮೋಡ್ ಹೊಂದಿದೆ. ಜತೆಗೆ, ಕ್ರಾಸ್‌ಬೀಟ್ಸ್ ಎಕ್ಸ್‌ಪ್ಲೋರ್ ಆ್ಯಪ್ ಹೊಂದಿದ್ದು, ಅದರ ಮೂಲಕ ವಿವಿಧ ಸ್ಪೋರ್ಟ್ಸ್ ಮತ್ತು ಆಕ್ಟಿವಿಟಿ ಮೋಡ್‌ಗಳ ಬಳಕೆ ಮಾಡಬಹುದು.

ADVERTISEMENT

ಹೃದಯ ಬಡಿತ ಮಾಪನ, ನಿದ್ರೆಯ ಪ್ರಮಾಣ ಸಹಿತ ವಿವಿಧ ಆಕರ್ಷಕ ಫೀಚರ್‌ ಜತೆಗೆ ಕ್ರಾಸ್‌ಬೀಟ್ಸ್ ಇಗ್ನೈಟ್ ಲೈಟ್ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.

IP68 ವಾಟರ್‌ಪ್ರೂಫ್ ಸರ್ಟಿಫಿಕೇಶನ್, ಒಮ್ಮೆ ಚಾರ್ಜ್‌ ಮಾಡಿದರೆ 15 ದಿನ ಬ್ಯಾಟರಿ ಬಾಳಿಕೆ ಇರುತ್ತದೆ. ಹೊಸ ಸ್ಮಾರ್ಟ್‌ವಾಚ್‌ crossbeats.com ಮೂಲಕ ₹1,999 ದರಕ್ಕೆ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.