ADVERTISEMENT

Fire-Boltt Talk Ultra | 123 ಸ್ಪೋರ್ಟ್ಸ್ ಮೋಡ್ ಸಹಿತ ಹೊಸ ಸ್ಮಾರ್ಟ್‌ವಾಚ್

ಫೈರ್ ಬೋಲ್ಟ್ ಟಾಕ್ ಅಲ್ಟ್ರಾ ನೂತನ ಸ್ಮಾರ್ಟ್‌ವಾಚ್ ಬಿಡುಗಡೆ‌‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜನವರಿ 2023, 13:57 IST
Last Updated 27 ಜನವರಿ 2023, 13:57 IST
   

ಬೆಂಗಳೂರು: ಭಾರತದ ಸ್ಮಾರ್ಟ್‌ವಾಚ್ ಮತ್ತು ಫಿಟ್ನೆಸ್ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಫೈರ್ ಬೋಲ್ಟ್ ಮಾದರಿಗಳು ಹೆಚ್ಚು ಜನಪ್ರಿಯತೆ ಗಳಿಸಿವೆ. ಬಜೆಟ್ ದರಕ್ಕೆ ಹೆಚ್ಚಿನ ಫೀಚರ್‌ಗಳನ್ನು ಬಳಕೆದಾರರಿಗೆ ಫೈರ್ ಬೋಲ್ಟ್ ಒದಗಿಸುತ್ತದೆ.

ಈ ಬಾರಿ ಭಾರತದ ಫಿಟ್ನೆಸ್ ಮತ್ತು ಗ್ಯಾಜೆಟ್ ಮಾರುಕಟ್ಟೆಗೆ ಫೈರ್ ಬೋಲ್ಟ್, ಟಾಕ್ ಅಲ್ಟ್ರಾ ಎನ್ನುವ ನೂತನ ಸ್ಮಾರ್ಟ್‌ವಾಚ್ ಅನ್ನು ಬಿಡುಗಡೆ ಮಾಡಿದೆ.

ಹೊಸ ಫೈರ್ ಬೋಲ್ಟ್‌ ಟಾಕ್ ಅಲ್ಟ್ರಾ, 1.39 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ, ಬ್ಲೂಟೂತ್ ಕಾಲಿಂಗ್ ಬೆಂಬಲ ಹೊಂದಿದೆ ಎಂದು ಕಂಪನಿ ತಿಳಿಸಿದೆ.

ADVERTISEMENT

ಜತೆಗೆ, 123 ವಿವಿಧ ಬಗೆಯ ಫಿಟ್ನೆಸ್ ಮತ್ತು ಸ್ಪೋರ್ಟ್ಸ್ ಮೋಡ್ ಟ್ರ್ಯಾಕಿಂಗ್, ಹೃದಯ ಬಡಿತ ಮಾಪನ ಮತ್ತು ರಕ್ತದಲ್ಲಿ ಆಮ್ಲಜನಕದ ಪ್ರಮಾಣವನ್ನು ಅಳೆಯುವ ಸೆನ್ಸರ್‌ಗಳನ್ನು ಹೊಂದಿದೆ. IP68 ವಾಟರ್ ಮತ್ತು ಡಸ್ಟ್ ರೆಸಿಸ್ಟನ್ಸ್ ರೇಟಿಂಗ್ ಫೈರ್‌ ಬೋಲ್ಟ್ ಸ್ಮಾರ್ಟ್‌ವಾಚ್‌ನ ವಿಶೇಷತೆಯಾಗಿದೆ.

ಫೈರ್ ಬೋಲ್ಟ್ ಟಾಕ್ ಅಲ್ಟ್ರಾ ಸ್ಮಾರ್ಟ್‌ವಾಚ್, ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್ ಇಂಡಿಯಾ ಮೂಲಕ ದೊರೆಯುತ್ತದೆ ಎಂದು ಕಂಪನಿ ತಿಳಿಸಿದೆ.

ನೂತನ ಸ್ಮಾರ್ಟ್‌ವಾಚ್ ಕಪ್ಪು, ನೀಲಿ, ಕೆಂಪು, ಗ್ರೇ, ಪಿಂಕ್ ಮತ್ತು ಟೀಲ್ ಎಂಬ 6 ಆಕರ್ಷಕ ಬಣ್ಣಗಳಲ್ಲಿ ದೊರೆಯಲಿದೆ ಎಂದು ಫೈರ್ ಬೋಲ್ಟ್ ಹೇಳಿದ್ದು, ₹1,999 ದರಕ್ಕೆ ಲಭ್ಯವಾಗಲಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.