ಬೆಂಗಳೂರು: ಫಿಟ್ನೆಸ್ ಮತ್ತು ಟೆಕ್ ಪ್ರಿಯರಿಗೆಂದೇ ವಿನ್ಯಾಸಗೊಳಿಸಿರುವ ಹುವಾವೆ ಜಿಟಿ 5 ಪ್ರೋ ಇದೀಗ ಟೈಟಾನಿಯಂ ಆವೃತ್ತಿಯಲ್ಲಿ ಅಮೆಜಾನ್ ಮತ್ತು ಫ್ಲಿಫ್‌ಕಾರ್ಟ್‌ನಲ್ಲಿ ದೊರೆಯಲಿದೆ.
ಸೊಗಸಾದ ವಿನ್ಯಾಸ, ದೀರ್ಘಾವಧಿಯ ಬ್ಯಾಟರಿ ಬಾಳಿಕೆ, ಹೆಲ್ತ್ ಮತ್ತು ಮೋಷನ್ ಟ್ರ್ಯಾಕಿಂಗ್, ಇನ್‌ಬಿಲ್ಟ್ ಕರೆ ಸೌಲಭ್ಯ ಮತ್ತು ನ್ಯಾವಿಗೇಷನ್ ವೈಶಿಷ್ಟ್ಯಗಳಿಂದ ಈ ವಾಚ್ ಗಮನ ಸೆಳೆದಿದೆ.
ಅತ್ಯುತ್ತಮ ಸ್ಟೋರ್ಟ್ ಮೋಡ್, ಇಂಟಿಗ್ರೇಟೆಡ್ ಜಿಪಿಎಸ್ ಮ್ಯಾಪ್ ಮತ್ತು ಅತ್ಯುತ್ತಮ ಇಸಿಜಿ ಮಾನಿಟರ್ ಹೊಂದಿರುವ ಈ ವಾಚ್ ಅನ್ನು ಅತ್ಯಾಧುನಿಕವಾಗಿ ವಿನ್ಯಾಸಗೊಳಿಸಲಾಗಿದೆ.
ಫಿಟ್ನೆಸ್ ಚಟುವಟಿಕೆಗಳ ಹೊರತಾಗಿಯೂ ಈ ವಾಚ್ ಸಮಗ್ರ ಆರೋಗ್ಯ ವಿವರಗಳನ್ನು ನೀಡುತ್ತದೆ. ಒತ್ತಡ ನಿರ್ವಹಣೆಗೆ ಹುವಾವೇ ಅಡ್ವಾನ್ಸ್ ಟ್ರುಸೆನ್ಸ್ ಟೆಕ್ನಾಲಜಿ, ಸ್ಲೀಪ್ ಎನಾಲಿಸಿಸ್, ಹಾರ್ಟ್ ಬೀಟ್ ಮತ್ತು ಹೆಲ್ತ್ ಟ್ರ್ಯಾಕಿಂಗ್ ಒಟ್ಟಾರೆ ಆರೋಗ್ಯ ವಿವರಗಳನ್ನು ಒದಗಿಸುತ್ತವೆ. ವೈಯಕ್ತಿಕ ವರ್ಕೌಟ್ ಮತ್ತು ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಇದು ಹೊಂದಿದೆ.
ಫ್ಯಾಷನ್ ಜೊತೆಗೆ ದೈನಂದಿನ ಚಟುವಟಿಕೆಗೆ ಹೊಂದುವಂತೆ ವಾಚ್ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಏರೋಸ್ಪೇಸ್-ಗ್ರೇಡ್ ಟೈಟಾನಿಯಂ ಮಿಶ್ರಲೋಹದಿಂದ ಈ ವಾಚ್ ಅನ್ನು ತಯಾರಿಸಲಾಗಿದ್ದು, ಇದರ ಮಾರುಕಟ್ಟೆ ಬೆಲೆ ₹39,000 ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.