ADVERTISEMENT

ಜಿಯೊದಿಂದ ಹೊಸ ವರ್ಷಕ್ಕೆ ಬಂಪರ್: ₹500ರ ರೀಚಾರ್ಜ್‌ನಲ್ಲಿ ಹಲವು ಆಫರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಡಿಸೆಂಬರ್ 2025, 12:49 IST
Last Updated 16 ಡಿಸೆಂಬರ್ 2025, 12:49 IST
   

ಅಂಬಾನಿ ಒಡೆತನದ ಟೆಲಿಕಾಂ ಸಂಸ್ಥೆಯಾಗಿರುವ ಜಿಯೊ ಕಂಪನಿ ತನ್ನ ಗ್ರಾಹಕರಿಗೆ ಹೊಸ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದೆ. ಹೊಸ ವರ್ಷಕ್ಕೆ ಹೊಸ ಮಾದರಿಯ ಪ್ಲಾನ್‌ಗಳನ್ನು ಪರಿಚಯಿಸಿರುವ ಜಿಯೊ, ಅನ್‌ಲಿಮಿಟೆಡ್‌ ಕರೆ, ಎಸ್‌ಎಮ್‌ಎಸ್‌ ಸೇರಿದಂತೆ 10ಕ್ಕೂ ಹೆಚ್ಚು ಒಟಿಟಿ ವೇದಿಕೆಗಳಿಗೆ ಉಚಿತ ಪ್ರವೇಶ ನೀಡಿದೆ. ಆ ಪ್ಲಾನ್‌ಗಳು ಯಾವುವು ಎಂಬ ಮಾಹಿತಿ ಇಲ್ಲಿದೆ. 

₹500 ಹೊಸ ಪ್ಲಾನ್: 

ನಿಮ್ಮ ಸ್ಮಾಟ್‌ಪೋನ್‌ಗೆ ₹500 ರ ರೀಚಾರ್ಜ್‌ನಿಂದ ಅನಿಯಮಿತ ಕರೆ ಹಾಗೂ ದಿನಕ್ಕೆ 100 ಎಸ್‌ಎಮ್‌ಎಸ್‌ ಸೇರಿದಂತೆ ದಿನಕ್ಕೆ 2 ಜಿಬಿ ಹೈಸ್ಪೀಡ್‌ ಡೇಟಾ ಸಿಗಲಿದೆ. 5ಜಿ ಮೊಬೈಲ್‌ ಬಳಕೆದಾರರಿಗೂ ಇದರಿಂದ ಲಾಭವಾಗಲಿದೆ. ಅನ್‌ಲಿಮಿಟೆಡ್‌ 5ಜಿ ಡೇಟಾ ಪಡೆಯಬಹುದು. ಈ ಯೋಜನೆಯಲ್ಲಿ ಒಟ್ಟಾರೆ 56 ಜಿಬಿ ಡೇಟಾ ಸಿಗಲಿದೆ. 

ADVERTISEMENT

ಜಿಯೊ ಒಟಿಟಿ ಪ್ಲ್ಯಾನ್‌:

₹500 ರ ರೀಚಾರ್ಜ್‌ನೊಂದಿಗೆ ಜಿಯೊ ಒಟಿಟಿ ಸೇರಿದಂತೆ ಇನ್ನೂ ಹಲವು ವೇದಿಕೆಗಳಿಗೆ ಪ್ರವೇಶ ಪ‍ಡೆಯಬಹುದು. ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ, ಯೂಟ್ಯೂಬ್ ಪ್ರೀಮಿಯಂ, ಜಿಯೋ ಹಾಟ್‌ಸ್ಟಾರ್ (ಮೊಬೈಲ್/ಟಿವಿ), ಜೀ5, ಡಿಸ್ಕವರಿ+, ಸೋನಿ ಲಿವ್, ಸನ್ ಎನ್‌ಎಕ್ಸ್‌ಟಿ, ಪ್ಲಾನೆಟ್ ಮರಾಠಿ, ಲಯನ್ಸ್‌ಗೇಟ್ ಪ್ಲೇ, ಚೌಪಾಲ್, ಫ್ಯಾನ್‌ಕೋಡ್ ಮತ್ತು ಹೊಯ್ಚೊಯ್ ವೇದಿಕೆಗಳಿಗೆ ಪ್ರವೇಶ ಪಡೆಯಬಹುದು. 

ಹೀರೋ ವಾರ್ಷಿಕ ರೀಚಾರ್ಜ್ ₹3,599 ಯೋಜನೆ

ಹೀರೋ ವಾರ್ಷಿಕ ರೀಚಾರ್ಜ್ ₹3,599 ಯೋಜನೆಯನ್ನು ಪರಿಚಯಿಸಿದೆ. ಇದು 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯಡಿ, ಅನಿಯಮಿತ 5G ಡೇಟಾ, ದಿನಕ್ಕೆ 2.5 GB ವೇಗದ ಡೇಟಾ, ಅನಿಯಮಿತ ಧ್ವನಿ ಕರೆಗಳನ್ನು ಪಡೆಯಬಹುದು.

ಹೊಸ ವರ್ಷದ ವಿಶೇಷ ಯೋಜನೆಯ ಭಾಗವಾಗಿ ಜಿಯೊ 18 ತಿಂಗಳ ಉಚಿತ ಗೂಗಲ್ ಜೆಮಿನಿ ಪ್ರೊ ಯೋಜನೆಯನ್ನು ಸಹ ನೀಡುತ್ತಿದೆ, ಇದು ₹35,100ಕ್ಕೆ ದೊರೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.