ADVERTISEMENT

ದೇಶದ ಮಾರುಕಟ್ಟೆಗೆ ನೂತನ ಸ್ಮಾರ್ಟ್‌ವಾಚ್ ಪರಿಚಯಿಸಿದ ನಾಯ್ಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಸೆಪ್ಟೆಂಬರ್ 2021, 7:42 IST
Last Updated 7 ಸೆಪ್ಟೆಂಬರ್ 2021, 7:42 IST
ನಾಯ್ಸ್‌ಫಿಟ್ ಕೋರ್ ಸ್ಮಾರ್ಟ್‌ವಾಚ್
ನಾಯ್ಸ್‌ಫಿಟ್ ಕೋರ್ ಸ್ಮಾರ್ಟ್‌ವಾಚ್   

ಬೆಂಗಳೂರು: ಫಿಟ್ನೆಸ್ ಕ್ರೇಜ್ ಮತ್ತು ಸ್ಮಾರ್ಟ್ ಫೀಚರ್ ಬಯಸುವ ಯುವಜನತೆಯನ್ನು ಗಮನದಲ್ಲಿರಿಸಿಕೊಂಡು ನಾಯ್ಸ್, ದೇಶದಲ್ಲಿ ಆಕರ್ಷಕ ಮಾದರಿಯ ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಿದೆ.

ನಾಯ್ಸ್‌ಫಿಟ್ ಕೋರ್ ಸ್ಮಾರ್ಟ್‌ವಾಚ್, ಏಳು ದಿನಗಳ ಬ್ಯಾಟರಿ ಬಾಳಿಕೆ ಹೊಂದಿರುತ್ತದೆ ಎಂದು ಕಂಪನಿ ಹೇಳಿದೆ.

ಆಂಡ್ರಾಯ್ಡ್ ಮತ್ತು ಐಫೋನ್ ಜತೆಗೆ ನೂತನ ನಾಯ್ಸ್‌ಫಿಟ್ ಸ್ಮಾರ್ಟ್‌ವಾಚ್ ಬಳಸಬಹುದಾಗಿದೆ.

ADVERTISEMENT

ಬೆಲೆ ಮತ್ತು ಲಭ್ಯತೆ

ಹೊಸ ನಾಯ್ಸ್‌ಫಿಟ್ ಕೋರ್ ಸ್ಮಾರ್ಟ್‌ವಾಚ್, ಭಾರತೀಯ ಮಾರುಕಟ್ಟೆಯಲ್ಲಿ ₹2,999 ದರ ಹೊಂದಿದೆ. ಕಂಪನಿ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ನೂತನ ಸ್ಮಾರ್ಟ್‌ವಾಚ್ ದೊರೆಯಲಿದೆ.

ನಾಯ್ಸ್‌ಫಿಟ್ ಕೋರ್ ಸ್ಮಾರ್ಟ್‌ವಾಚ್, 1.28 ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ ಹೊಂದಿದೆ. ಎರಡು ಆಕರ್ಷಕ ಬಣ್ಣಗಳು, 13 ವಿವಿಧ ಸ್ಪೋರ್ಟ್ಸ್ ಮೋಡ್ ಆಯ್ಕೆ ಕೂಡ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.