ADVERTISEMENT

ಆಕರ್ಷಕ ವಿನ್ಯಾಸದ ಟ್ಯಾಬ್ಲೆಟ್ ಪರಿಚಯಿಸಿದ ನೋಕಿಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಅಕ್ಟೋಬರ್ 2021, 11:46 IST
Last Updated 6 ಅಕ್ಟೋಬರ್ 2021, 11:46 IST
ನೋಕಿಯಾ, ನೂತನ ಮಾದರಿಯ ಟ್ಯಾಬ್ಲೆಟ್ ಬಿಡುಗಡೆ ಮಾಡಿದೆ.
ನೋಕಿಯಾ, ನೂತನ ಮಾದರಿಯ ಟ್ಯಾಬ್ಲೆಟ್ ಬಿಡುಗಡೆ ಮಾಡಿದೆ.   

ಬೆಂಗಳೂರು: ಬೇಸಿಕ್ ಫೀಚರ್ ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಹೆಸರು ಗಳಿಸಿದ್ದ ನೋಕಿಯಾ, ಆಕರ್ಷಕ ವಿನ್ಯಾಸದ ಟ್ಯಾಬ್ಲೆಟ್ ಒಂದನ್ನು ಬಿಡುಗಡೆ ಮಾಡಿದೆ.

ನೋಕಿಯಾ T20 ಟ್ಯಾಬ್ಲೆಟ್ ಅನ್ನು ಎಚ್‌ಎಂಡಿ ಗ್ಲೋಬಲ್ ಪರಿಚಯಿಸಿದ್ದು, 2K ಡಿಸ್‌ಪ್ಲೇ ಮತ್ತು 8 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮೆರಾ ಹೊಂದಿದೆ.

ನೋಕಿಯಾ T20

ADVERTISEMENT

ಹೊಸ ನೋಕಿಯಾ T20 ಟ್ಯಾಬ್ಲೆಟ್‌ನಲ್ಲಿ 4GB RAM, ಗೂಗಲ್ ಕಿಡ್ಸ್ ಸ್ಪೇಸ್ ಮತ್ತು ದಿನಪೂರ್ತಿ ಬಾಳಿಕೆ ಬರುವ ಬ್ಯಾಟರಿ ಇದೆ ಎಂದು ಕಂಪನಿ ಹೇಳಿದೆ.

ಪ್ರಸ್ತುತ ಯುರೋಪ್ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಿದ್ದು, ಆರಂಭಿಕ ಬೆಲೆ ಯುರೋಪ್ ದರಕ್ಕೆ ಹೋಲಿಸಿದರೆ ವೈ-ಫೈ ಮಾದರಿಗೆ ₹17,200 ಮತ್ತು ವೈ-ಫೈ + 4G ಮಾದರಿಗೆ ₹20,600 ದರವಿದೆ.

ಆ್ಯಂಡ್ರಾಯ್ಡ್ 11 ಓಎಸ್, 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 8,200mAh ಬ್ಯಾಟರಿ ಹೊಸ ನೋಕಿಯಾ T20 ಟ್ಯಾಬ್ಲೆಟ್‌ನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.