ADVERTISEMENT

Reno 7 Pro 5G: ನೂತನ ಸರಣಿಯ ಸ್ಮಾರ್ಟ್‌ಫೋನ್ ಪರಿಚಯಿಸಿದ ಒಪ್ಪೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಫೆಬ್ರುವರಿ 2022, 12:55 IST
Last Updated 4 ಫೆಬ್ರುವರಿ 2022, 12:55 IST
ಒಪ್ಪೊ ರೆನೊ 7 ಪ್ರೊ 5G
ಒಪ್ಪೊ ರೆನೊ 7 ಪ್ರೊ 5G   

ಬೆಂಗಳೂರು: ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿರುವ ಒಪ್ಪೊ, ರೆನೊ ಸರಣಿಯಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.

ಒಪ್ಪೊ ರೆನೊ 7 5G ಮತ್ತು ಒಪ್ಪೊ ರೆನೊ 7 ಪ್ರೊ 5G ಎಂಬ ಎರಡು ಆಕರ್ಷಕ ಮಾದರಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇರಿಸಿವೆ ಎಂದು ಕಂಪನಿ ಹೇಳಿದೆ.

ಒಪ್ಪೊ ರೆನೊ 7 5G
ಹೊಸ ಒಪ್ಪೊ ಫೋನ್‌ನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 900 ಮ್ಯಾಕ್ಸ್ 5G ಪ್ರೊಸೆಸರ್, 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ 8+2 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ.

ADVERTISEMENT

4500mAh ಬ್ಯಾಟರಿ ಇದರಲ್ಲಿದ್ದು, 8 GB + 256 GB ಸ್ಟೋರೇಜ್ ಹೊಂದಿದೆ. ದೇಶದಲ್ಲಿ ಒಪ್ಪೊ ರೆನೊ 7 5G ಬೆಲೆ ₹28,999 ಇದೆ.

ಒಪ್ಪೊ ರೆನೊ 7 ಪ್ರೊ 5G
ರೆನೊ 7 ಪ್ರೊ 5G ಸ್ಮಾರ್ಟ್‌ಫೋನ್‌ನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 1200 ಮ್ಯಾಕ್ಸ್ 5G ಪ್ರೊಸೆಸರ್, 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ 8+2+ಕಲರ್ ಟೆಂಪರೇಚರ್ ಸೆನ್ಸರ್ ಇದೆ.

4500mAh ಬ್ಯಾಟರಿ ಇದರಲ್ಲಿದ್ದು, 12 GB + 256 GB ಸ್ಟೋರೇಜ್ ಹೊಂದಿದೆ. ದೇಶದಲ್ಲಿ ಒಪ್ಪೊ ರೆನೊ 7 ಪ್ರೊ 5G ಬೆಲೆ ₹39,999 ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.