ADVERTISEMENT

ಸ್ಯಾಮ್‌ಸಂಗ್‌ ಹೊಸ ಫೋನ್‌ ಗ್ಯಾಲಕ್ಸಿ ಎಂ31: ಆರಂಭಿಕ ಬೆಲೆ ₹15,999 

ಏಜೆನ್ಸೀಸ್
Published 17 ಫೆಬ್ರುವರಿ 2020, 11:07 IST
Last Updated 17 ಫೆಬ್ರುವರಿ 2020, 11:07 IST
ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಂ31
ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಂ31   
""

ಬೆಂಗಳೂರು: ಸ್ಯಾಮ್‌ಸಂಗ್‌ ಗ್ಯಾಲಕ್ಸಿ 'ಎಂ' ಸರಣಿಯ ಹೊಸ ಸ್ಮಾರ್ಟ್‌ಫೋನ್‌ ಎಂ31 ಭಾರತದಲ್ಲಿ ಬಿಡುಗಡೆ ಸಿದ್ಧತೆ ನಡೆಸಿದೆ. ಆರಂಭಿಕ ಬೆಲೆ ಅಂದಾಜು ₹15,999 ಇರಲಿದೆ.

ಫೆಬ್ರುವರಿ 25ರಂದು ಬಿಡುಗಡೆ ಆಗಲಿರುವ ಗ್ಯಾಲಕ್ಸಿ ಎಂ31, 6ಜಿಬಿ ರ್‍ಯಾಮ್‌ ಒಳಗೊಂಡಿರಲಿದೆ. ಸಂಗ್ರಹ ಸಾಮರ್ಥ್ಯ 64 ಜಿಬಿ ಮತ್ತು 128 ಜಿಬಿ ಎರಡು ಮಾದರಿಗಳಲ್ಲಿ ಲಭ್ಯವಿರಲಿದೆ. 64ಎಂಪಿ ಕ್ಯಾಮೆರಾ ಹಾಗೂ 6,000 ಎಂಎಎಚ್‌ ಬ್ಯಾಟರಿ ಹೊಂದಿರುವುದರಿಂದಹೊಸ ಫೋನ್ ಕುತೂಹಲ ಹೆಚ್ಚಿಸಿದೆ.

ಮಾರ್ಚ್‌ ಮೊದಲ ವಾರದಿಂದ ಎಂ31 ಖರೀದಿಗೆ ಸಿಗಲಿದೆ ಎಂದು ಐಎಎನ್‌ಎಸ್‌ ವರದಿ ಮಾಡಿದೆ. ಅಮೆಜಾನ್‌ ಹಾಗೂ ಸ್ಯಾಮ್‌ಸಂಗ್‌ ಆನ್‌ಲೈನ್‌ ವೇದಿಕೆಗಳಲ್ಲಿ ಸ್ಯಾಮ್‌ಸಂಗ್‌ 'ಎಂ' ಸರಣಿಯ ಫೋನ್‌ಗಳು ಲಭ್ಯವಿದೆ. ಆದರೆ, ಎಂ31 ಸ್ಮಾರ್ಟ್‌ಫೋನ್‌ ಮಾರಾಟ ಮಳಿಗೆಗಳಲ್ಲೂ ಲಭ್ಯವಿರಲಿದೆ ಎನ್ನಲಾಗಿದೆ.

ADVERTISEMENT

ಕಳೆದ ವರ್ಷ ಸ್ಯಾಮ್‌ಸಂಗ್‌, ಗ್ಯಾಲಕ್ಸಿ ಎಂ ಸರಣಿಯ ಫೋನ್‌ಗಳನ್ನು ಭಾರತದಲ್ಲಿ ಆನ್‌ಲೈನ್‌–ಎಕ್ಸ್‌ಕ್ಲೂಸಿವ್‌ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಆಗಿ ಪರಿಚಯಿಸಿತ್ತು. 2019ರಲ್ಲಿ ಹಬ್ಬಗಳ ಸಂದರ್ಭದಲ್ಲಿ ಬಿಡುಗಡೆಯಾದ ಗ್ಯಾಲಕ್ಸಿ ಎಂ30ಎಸ್‌ ಹೆಚ್ಚು ಗ್ರಾಹಕರನ್ನು ಸೆಳೆಯುವ ಮೂಲಕ, ದೇಶದಲ್ಲಿ ಸ್ಯಾಮ್‌ಸಂಗ್‌ ಮಾರುಕಟ್ಟೆ ಇನ್ನಷ್ಟು ವಿಸ್ತರಿಸಿತು.

ಪ್ರಸ್ತುತ ಗ್ಯಾಲಕ್ಸಿ ಎಂ ಸರಣಿಯಲ್ಲಿ ಎಂ10, ಎಂ20, ಎಂ30, ಎಂ40, ಎಂ10ಎಸ್‌ ಹಾಗೂ ಎಂ30ಎಸ್‌ ಲಭ್ಯವಿದೆ. ಬಿಡುಗಡೆಯಾಗಲಿರುವ ಎಂ31 ಸಹ ಸೂಪರ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿರಲಿದೆ. ಉಳಿದ ವಿವರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ಏನೆಲ್ಲ ಇರಲಿದೆ?

ಕ್ವಾಡ್‌ಕೋರ್‌(ನಾಲ್ಕು) ಕ್ಯಾಮೆರಾ: 64ಎಂಪಿ

ಡಿಸ್‌ಪ್ಲೇ: ಎಫ್‌ಎಚ್‌ಡಿ+ಅಮೋಲೆಡ್‌

ಬ್ಯಾಟರಿ: 6000 ಎಂಎಎಚ್‌

ರ್‍ಯಾಮ್‌: 6ಜಿಬಿ

ಸಂಗ್ರಹ ಸಾಮರ್ಥ್ಯ: 64 ಜಿಬಿ /128 ಜಿಬಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.