ADVERTISEMENT

Samsung Galaxy S25 Edge: ಪ್ರೀ ಆರ್ಡರ್‌ ಆರಂಭ; ಬೆಲೆ, ವೈಶಿಷ್ಟ್ಯತೆ

​ಪ್ರಜಾವಾಣಿ ವಾರ್ತೆ
Published 21 ಮೇ 2025, 13:17 IST
Last Updated 21 ಮೇ 2025, 13:17 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಸ್ಯಾಮ್‌ಸಂಗ್ ಕಂಪನಿಯು ತನ್ನ ಹೊಸ ಗ್ಯಾಲಕ್ಸಿ ಎಸ್ ಸರಣಿಯ ಗ್ಯಾಲಕ್ಸಿ ಎಸ್25 ಎಡ್ಜ್ ಸ್ಮಾರ್ಟ್‌ಫೋನ್‌ಗೆ ಪ್ರೀ ಆರ್ಡರ್‌ಗಳನ್ನು ಆರಂಭಿಸಿದೆ.

ಈ ಫೋನ್‌ 5.8 ಎಂಎಂ ದಪ್ಪದ ಚಾಸಿಸ್‌ ಹೊಂದಿದ್ದು, 163 ಗ್ರಾಂ ತೂಕವಿದೆ. ಫೋನ್‌ನ ಅಂಚುಗಳು ಟೈಟಾನಿಯಂ ಫ್ರೇಮ್‌ನಿಂದ ಕೂಡಿವೆ. ಡಿಸ್ ಪ್ಲೇಗೆ ಹೊಸ ಕಾರ್ನಿಂಗ್, ಗೊರಿಲ್ಲಾ ಗ್ಲಾಸ್ ಸೆರಾಮಿಕ್ 2 ಬಳಸಲಾಗಿದೆ. ಇದು ಗಟ್ಟಿಮುಟ್ಟಾದ ಗಾಜಿನ ಸೆರಾಮಿಕ್ ಆಗಿದ್ದು, ದೀರ್ಘ ಬಾಳಿಕೆ ಬರಲಿದೆ ಎಂದು ಕಂಪನಿ ತಿಳಿಸಿದೆ.

200 ಎಂಪಿ ಕ್ಯಾಮೆರಾ, 12 ಎಂಪಿ ಅಲ್ಟ್ರಾವೈಡ್ ಸೆನ್ಸಾರ್ ಆಟೊ ಫೋಕಸ್ ವೈಶಿಷ್ಟ್ಯ ಹೊಂದಿದೆ. ನಿರಂತರವಾಗಿ ಬಳಕೆ ಮಾಡಿದರೂ ಫೋನ್‌ ಬಿಸಿಯಾಗುವುದಿಲ್ಲ. ಕಸ್ಟಮೈಸ್ಡ್ ಮೊಬೈಲ್ ಡಿಜಿಟಲ್ ನ್ಯಾಚುರಲ್ ಇಮೇಜ್ ಎಂಜಿನ್ (ಎಂಡಿಎನ್ಎಲ್ಇ) ಸಂಯೋಜನೆಯನ್ನು ಹೊಂದಿದೆ ಎಂದು ತಿಳಿಸಿದೆ.

ADVERTISEMENT

ಗ್ಯಾಲಕ್ಸಿ ಎಸ್25 ಎಡ್ಜ್ ಎಲ್ಲಾ ಪ್ರಮುಖ ಆನ್‌ಲೈನ್ ಮತ್ತು ಆಫ್‌ಲೈನ್ ರಿಟೇಲ್ ಮಳಿಗೆಗಳಲ್ಲಿ ಪ್ರೀ ಆರ್ಡರ್‌ ಮಾಡಲು ಲಭ್ಯವಿದೆ. ಪ್ರೀ ಆರ್ಡರ್ ಮಾಡುವ ಗ್ರಾಹಕರಿಗೆ ₹12 ಸಾವಿರ ಮೌಲ್ಯದ ಉಚಿತ ಸ್ಟೋರೇಜ್ ಅಪ್‌ಗ್ರೇಡ್ ಸೌಲಭ್ಯ ದೊರೆಯಲಿದೆ. ಗ್ರಾಹಕರು 9 ತಿಂಗಳವರೆಗಿನ ನೋ ಕಾಸ್ಟ್ ಇಎಂಐ ಸೌಲಭ್ಯವನ್ನೂ ಪಡೆಯಬಹುದು.

ಟೈಟಾನಿಯಂ ಸಿಲ್ವರ್ ಮತ್ತು ಟೈಟಾನಿಯಂ ಜೆಟ್‌ಬ್ಲಾಕ್ ಬಣ್ಣಗಳಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ www.samsung.comಗೆ ಭೇಟಿ ನೀಡಬಹುದು.

ಟೈಟಾನಿಯಂ ಸಿಲ್ವರ್ ಮತ್ತು ಟೈಟಾನಿಯಂ ಜೆಟ್‌ಬ್ಲಾಕ್ ಬೆಲೆ ಕ್ರಮವಾಗಿ ₹1,09,999 ಮತ್ತು ₹1,21,999 ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.