ADVERTISEMENT

TECNO CAMON 19: ಫೋಟೊಗ್ರಫಿ ಪ್ರಿಯರಿಗಾಗಿ ಆಕರ್ಷಕ ಸ್ಮಾರ್ಟ್‌ಫೋನ್

ಟೆಕ್‌ನೊ ಕ್ಯಾಮನ್ ಸರಣಿಯಲ್ಲಿ ಹೊಸ ಸ್ಮಾರ್ಟ್‌ಫೋನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜುಲೈ 2022, 10:18 IST
Last Updated 13 ಜುಲೈ 2022, 10:18 IST
ಟೆಕ್‌ನೊ ಕ್ಯಾಮನ್ 19
ಟೆಕ್‌ನೊ ಕ್ಯಾಮನ್ 19   

ಬೆಂಗಳೂರು: ದೇಶದ ಗ್ಯಾಜೆಟ್ ಮಾರುಕಟ್ಟೆಗೆ ಈಗಾಗಲೇ ವಿವಿಧ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿರುವ ಟೆಕ್‌ನೊ, ಆಕರ್ಷಕ ವಿನ್ಯಾಸದ ನೂತನ ಕ್ಯಾಮನ್ 19 ಬಿಡುಗಡೆ ಮಾಡಿದೆ.

ಸ್ಮಾರ್ಟ್‌ಪೋನ್ ಫೋಟೊಗ್ರಫಿ ಪ್ರಿಯರನ್ನು ಗಮನದಲ್ಲಿರಿಸಿಕೊಂಡು ಈ ಮಾದರಿಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಕಂಪನಿ ಹೇಳಿದೆ.

ತನ್ನ ವರ್ಗದಲ್ಲೇ ಮೊದಲ ಬಾರಿಗೆ RGBW ಸೆನ್ಸರ್ ಸಹಿತ 64 ಮೆಗಾಪಿಕ್ಸೆಲ್ ತ್ರಿವಳಿ ಕ್ಯಾಮೆರಾವನ್ನು ಟೆಕ್‌ನೊ ಪರಿಚಯಿಸಿದೆ. ಟೆಕ್‌ನೊ ಕ್ಯಾಮನ್ 19 ಜತೆಗೆ ಟೆಕ್‌ನೊ ಕ್ಯಾಮನ್ 19 ನಿಯೊ ಕೂಡ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ADVERTISEMENT

ಟೆಕ್‌ನೊ ಕ್ಯಾಮನ್ 19
6GB LPDDR4x RAM ಮತ್ತು 5GB Virtual RAM ಜತೆಗೆ 128GB ಸ್ಟೋರೇಜ್ ಹೊಂದಿದೆ.

6.8 ಇಂಚಿನ ಫುಲ್‌ಎಚ್‌ಡಿ ಡಿಸ್‌ಪ್ಲೇ, Helio G85 ಸೂಪರ್‌ಫಾಸ್ಟ್ ಪ್ರೊಸೆಸರ್, 18W ಸೇಫ್ ಚಾರ್ಜರ್ ಜತೆಗೆ 5000mAh ಬ್ಯಾಟರಿ ಇದರಲ್ಲಿದೆ.

64 ಮೆಗಾಪಿಕ್ಸೆಲ್ ತ್ರಿವಳಿ ಕ್ಯಾಮೆರಾ ಟೆಕ್‌ನೊ ಕ್ಯಾಮನ್ 19 ವಿಶೇಷತೆಯಾಗಿದ್ದು, 16 ಮೆಗಾಪಿಕ್ಸೆಲ್ ಸೆಲ್ಫಿ ಇದರ ವಿಶೇಷತೆ ಎಂದು ಕಂಪನಿ ತಿಳಿಸಿದೆ.

ಬೆಲೆ ವಿವರ
ನೂತನ ಟೆಕ್‌ನೊ ಕ್ಯಾಮನ್ 19 ಇಕೊ ಬ್ಲ್ಯಾಕ್, ಸೀ ಸಾಲ್ಟ್ ವೈಟ್ ಮತ್ತು ಜಿಯೊಮೆಟ್ರಿಕ್ ಗ್ರೀನ್ ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ದೊರೆಯಲಿದ್ದು, ₹14,999 ದರಕ್ಕೆ ಲಭ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.