ADVERTISEMENT

Tecno Spark 9T: ಕಡಿಮೆ ಬೆಲೆಯಲ್ಲಿ ಅತ್ಯಾಕರ್ಷಕ ಫೀಚರ್‌ಗಳುಳ್ಳ ಟೆಕ್‌ನೋ ಫೋನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜುಲೈ 2022, 12:17 IST
Last Updated 30 ಜುಲೈ 2022, 12:17 IST
New Tecno Spark 9T
New Tecno Spark 9T   

ನವದೆಹಲಿ; ಚೀನಾ ಮೂಲದ ಟೆಕ್‌ನೋ (TECNO)ಮೊಬೈಲ್ ಕಂಪನಿ ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿತ್ವರಿತವಾಗಿ ಗುರುತಿಸಿಕೊಳ್ಳುತ್ತಿರುವ ಅಗ್ರಗಣ್ಯ ಕಂಪನಿಯಾಗಿದೆ.ಜು.27 ರಂದುಈ ಕಂಪನಿ ಭಾರತದಲ್ಲಿಬಿಡುಗಡೆ ಮಾಡಿರುವ ಕಡಿಮೆ ಬೆಲೆಯ ಅತ್ಯಾಕರ್ಷಕ ಫೀಚರ್‌ಗಳುಳ್ಳ ಹೊಸ ಮೊಬೈಲ್ ಭಾರಿಸದ್ದು ಮಾಡುತ್ತಿದೆ.

ಟೆಕ್‌ನೋ ಭಾರತದ ಮಾರುಕಟ್ಟೆಗೆ ‘ಟೆಕ್‌ನೋ ಸ್ಪಾರ್ಕ್‌ 9ಟಿ’ (Tecno Spark 9T)ಎಂಬ ಹೊಸ ಸ್ಮಾರ್ಟ್‌ಫೋನ್‌ನ್ನು ಪರಿಚಯಿಸಿದೆ.

6.6 ಇಂಚಿನ ಎಚ್‌ಡಿ ಸ್ಕ್ರೀನ್‌ ಮೂಲಕ ಬರೋಬ್ಬರಿ 50 ಎಂಪಿ ಹಿಂಬದಿಯ ಕ್ಯಾಮೆರಾದೊಂದಿಗೆ ಹಾಗೂ 8ಎಂಪಿ ಸೆಲ್ಪಿ ಕ್ಯಾಮೆರಾದೊಂದಿಗೆಸ್ಪಾರ್ಕ್‌ 9ಟಿ ವಿಶೇಷವಾಗಿಗಮನ ಸೆಳೆದಿದೆ. ಅತ್ಯಾಧುನಿಕ ಕ್ಯಾಮೆರಾ ಮೂಲಕ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಈ ಮೊಬೈಲ್‌ನ ಒಂದು ಪ್ರಮುಖ ವಿಶೇಷವೆಂದರೆ5000mAh ದೀರ್ಘ ಬಾಳಿಕೆ ಬ್ಯಾಟರಿಯನ್ನು ಹೊಂದಿರುವುದು. ಕ್ಯಾಮೆರಾ ಪ್ರಿಯರಿಗೆ ಹಾಗೂ ಸೆಲ್ಪಿ ಪ್ರಿಯರಿಗೆ ಇದು ಹೇಳಿಮಾಡಿಸಿದ ಫೋನ್ ಆಗಿ ತೋರುತ್ತಿದೆ.

ADVERTISEMENT

ಅತ್ಯಾಧುನಿಕ ಹಾಗೂ ತ್ವರಿತ ‘ಮಿಡಿಯಾ ಟೇಕ್ ಹಿಲಿಯೋ ಜಿ35 ಪ್ರೊಸೆಸರ್’ ಮೂಲಕ4 ಜಿಬಿ RAM ಹಾಗೂ 128ಜಿಬಿ ಹಾರ್ಡ್‌ಡಿಸ್ಕ್‌ನ್ನು ಈ ಫೋನ್ ಹೊಂದಿದೆ. ಹಾರ್ಡ್‌ಡಿಸ್ಕ್‌ನ್ನು 512 ಜಿಬಿವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ. ಹಾಗೆಯೇ 4ಜಿಬಿ ಇರುವ RAM ಸಾಮರ್ಥ್ಯವನ್ನೂ ವರ್ಚುವಲ್‌ ಆಗಿ7ಜಿಬಿವರೆಗೆ ಹೆಚ್ಚಿಸಿಕೊಳ್ಳಲು ಅವಕಾಶ ಇದೆ.

ಅಂಡ್ರಾಯ್ಡ್ 11HiOS ಒಎಸ್ ಹೊಂದಿದ್ದು ಅತ್ಯುತ್ತಮ ಕಾರ್ಯನಿರ್ವಹಣೆಯನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ.

ಇನ್ನೊಂದು ವಿಶೇಷವೆಂದರೆ 18W ಸಿ–ಪೋರ್ಟರ್‌ ಚಾರ್ಜಿಂಗ್ ಸೌಲಭ್ಯದೊಂದಿಗೆ ಈ ಫೋನ್ ಅತ್ಯಂತ ತ್ವರಿತವಾಗಿ ಚಾರ್ಜ್ ಆಗುತ್ತದೆ. ಉತ್ತಮ ಗುಣಮುಟ್ಟದ ಡಿಟಿಎಸ್ ಆಡಿಯೊ ಔಟ್‌ಪುಟ್ ಹೊಂದಿದೆ.

ಈ ಟೆಕ್‌ನೋ 9ಟಿ ಮೊಬೈಲ್ಟರ್ಕೋಯಿಸ್ ಸಯಾನ್, ಅಟ್ಲಾಂಟಿಕ್ ಬ್ಲೂ, ಐರಿಸ್ ಪರ್ಪಲ್ ಮತ್ತು ಟಹೀಟಿ ಗೋಲ್ಡ್ ಎಂಬ ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಲಭ್ಯ ಇದೆ.

ಅಂದಹಾಗೇ ಅತ್ಯಂತ ಕಡಿಮೆ ಪರಿಚಯಾತ್ಮಕಬೆಲೆಯಲ್ಲಿ ಅಂದರೆ ₹9,299 ಗೆಟೆಕ್‌ನೋ ಸ್ಪಾರ್ಕ್‌ 9ಟಿ ಸಿಗಲಿದೆ. ಆಗಸ್ಟ್‌ 6ರಿಂದ ಎಕ್ಸ್‌ಕ್ಲೂಸಿವ್‌ ಆಗಿ ಅಮೆಜಾನ್‌ನಲ್ಲಿ ಈ ಫೋನ್ ಖರೀದಿಗೆ ಲಭ್ಯವಿದೆ.

ಟೆಕ್‌ನೋ ಸ್ಪಾರ್ಕ್‌, ಕಾಮೋನ್, ಪೋವಾ ಹಾಗೂ ಪಾಪ್ ಎಂಬ ನಾಲ್ಕು ಮಾದರಿಯ 15 ಬಗೆಯ ಫೋನ್‌ಗಳನ್ನು ಉತ್ಪಾದಿಸುತ್ತಿದೆ.

‘ಟೆಕ್‌ನೋ ಸ್ಪಾರ್ಕ್‌ 9ಟಿ’ ಭಾರತೀಯ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಉತ್ತಮ ಅನುಭವವನ್ನು ಖಾತ್ರಿಗೊಳಿಸುತ್ತದೆ’ಎಂದು ಟ್ರಾನ್ಸಿಸನ್ ಇಂಡಿಯಾ ಸಿಇಒ (ಟೆಕ್‌ನೋ ಮೊಬೈಲ್‌ನ ಮಾತೃಸಂಸ್ಥೆ)ಅರ್ಜಿತ್ ತಲಪಾತ್ರಾ ತಿಳಿಸಿದ್ದಾರೆ. ‘ಸುಧಾರಿತ ತಂತ್ರಜ್ಞಾನದೊಂದಿಗೆ ಉತ್ತಮ ದರ್ಜೆಯ ಉತ್ಪನ್ನಗಳನ್ನು ಗ್ರಾಹಕರಿಗೆನೀಡುವ ಮೂಲಕ ನಾವು ಮಾರುಕಟ್ಟೆ ಪಾಲನ್ನು ಧನಾತ್ಮಕವಾಗಿ ಪಡೆಯುತ್ತಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

2006 ರಲ್ಲಿ ಸ್ಥಾಪನೆಯಾದ ಚೀನಾ ಮೂಲದ ಟೆಕ್‌ನೋಮೊಬೈಲ್ ಚೀನಾದ ಶೆನ್‌ಜೆನ್‌ನಲ್ಲಿ ಹೆಡ್‌ಕ್ವಾರ್ಟರ್‌ ಹೊಂದಿದೆ. ಟೆಕ್‌ನೋಆಫ್ರಿಕನ್, ಮಧ್ಯಪ್ರಾಚ್ಯ, ಆಗ್ನೇಯ ಏಷ್ಯಾ, ದಕ್ಷಿಣ ಏಷ್ಯಾ ಮತ್ತು ಲ್ಯಾಟಿನ್ ಅಮೇರಿಕನ್ ಮಾರುಕಟ್ಟೆಗಳ ಮೇಲೆತನ್ನ ವ್ಯವಹಾರವನ್ನು ಕೇಂದ್ರೀಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.