ADVERTISEMENT

ಯುದ್ಧ ವಿಮಾನ ಎಸ್ಕೇಪ್ ಸಿಸ್ಟಂ ಹೈ-ಸ್ಪೀಡ್ ರಾಕೆಟ್ ಸ್ಲೆಜ್ ಪರೀಕ್ಷೆ ಯಶಸ್ವಿ

ಪಿಟಿಐ
Published 3 ಡಿಸೆಂಬರ್ 2025, 9:48 IST
Last Updated 3 ಡಿಸೆಂಬರ್ 2025, 9:48 IST
<div class="paragraphs"><p>ಚಿತ್ರ ಕೃಪೆ: (X/<a href="https://x.com/DefenceMinIndia">@DefenceMinIndia</a>)</p></div>

ಚಿತ್ರ ಕೃಪೆ: (X/@DefenceMinIndia)

   

ನವದೆಹಲಿ: ಯುದ್ಧ ವಿಮಾನ ಎಸ್ಕೇಪ್ ಸಿಸ್ಟಂನ ಹೈ-ಸ್ಪೀಡ್ ರಾಕೆಟ್ ಸ್ಲೆಜ್ ಪರೀಕ್ಷೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಯಶಸ್ವಿಯಾಗಿ ನಡೆಸಿತು.

ಆ ಮೂಲಕ ಭಾರತವು ಸುಧಾರಿತ ಸ್ವದೇಶಿ ನಿರ್ಮಿತ ಎಸ್ಕೇಪ್ ವ್ಯವಸ್ಥೆಯ ಸಾಮರ್ಥ್ಯವನ್ನು ಹೊಂದಿರುವ ಎಲೈಟ್ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಗೊಂಡಿತು.

ADVERTISEMENT

ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಹಯೋಗದೊಂದಿಗೆ ಅತ್ಯಂತ ಸಂಕೀರ್ಣವಾದ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಯಿತು.

ಚಂಡೀಗಢದ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ರಿಸರ್ಚ್ ಲ್ಯಾಬೊರೇಟರಿ (ಟಿಬಿಆರ್‌ಎಲ್) ಯ ರೈಲ್ ಟ್ರ್ಯಾಕ್ ರಾಕೆಟ್ ಸ್ಲೆಜ್ (ಆರ್‌ಟಿಆರ್‌ಎಸ್) ಘಟಕದಲ್ಲಿ ಗಂಟೆಗೆ 800 ಕಿ.ಮೀ. ವೇಗದಲ್ಲಿ ಯುದ್ಧ ವಿಮಾನ ಎಸ್ಕೇಪ್ ಸಿಸ್ಟಂ ಪರೀಕ್ಷೆಯನ್ನು ನಡೆಸಲಾಯಿತು.

ರಾಕೆಟ್ ಸ್ಲೆಜ್ ಪರೀಕ್ಷೆಯಲ್ಲಿ, ರಾಕೆಟ್ ಪ್ರೊಪಲ್ಷನ್, ಗಾಳಿಯಲ್ಲಿ ಚಲಿಸುವ ಯುದ್ಧ ವಿಮಾನಕ್ಕೆ ಸಮಾನವಾಗಿ ಹಳಿಗಳ ಮೇಲೆ ವೇಗವಾಗಿ ಚಲಿಸುತ್ತದೆ.

'ಸ್ವಾವಲಂಬಿ ಭಾರತದ ದೇಶೀಯ ರಕ್ಷಣಾ ಸಾಮರ್ಥ್ಯದಲ್ಲಿ ಇದು ಮಹತ್ವದ ಮೈಲಿಗಲ್ಲು' ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಬಣ್ಣಿಸಿದ್ದಾರೆ. ಅಲ್ಲದೆ ಈ ಯಶಸ್ವಿ ಪರೀಕ್ಷೆಗಾಗಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಡಿಆರ್‌ಡಿಒ, ವಾಯುಪಡೆ, ಏನೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ ಮತ್ತು ಎಚ್‌ಎಎಲ್ ಅನ್ನು ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.