ADVERTISEMENT

ಜನವರಿಯಲ್ಲಿ GSLV ಯೋಜನೆ; ಶ್ರೀಹರಿಕೋಟಾದಿಂದ ಚಾರಿತ್ರಿಕ 100ನೇ ಉಡಾವಣೆ: ಸೋಮನಾಥ್

ಪಿಟಿಐ
Published 31 ಡಿಸೆಂಬರ್ 2024, 2:01 IST
Last Updated 31 ಡಿಸೆಂಬರ್ 2024, 2:01 IST
<div class="paragraphs"><p>ಸ್ಪೇಡೆಕ್ಸ್‌ ಯೋಜನೆ,&nbsp;ಎಸ್‌.ಸೋಮನಾಥ್</p></div>

ಸ್ಪೇಡೆಕ್ಸ್‌ ಯೋಜನೆ, ಎಸ್‌.ಸೋಮನಾಥ್

   

(ಪಿಟಿಐ ಚಿತ್ರಗಳು)

ಶ್ರೀಹರಿಕೋಟಾ: ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಚಾರಿತ್ರಿಕ 100ನೇ ಉಡಾವಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸಜ್ಜಾಗಿದ್ದು, ಹೊಸ ವರ್ಷದಲ್ಲಿ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್‌ಎಲ್‌ವಿ) ಉಡ್ಡಯನವಾಗಲಿದೆ ಎಂದು ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್ ತಿಳಿಸಿದ್ದಾರೆ.

ADVERTISEMENT

ಆ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಲು ಇಸ್ರೊ ಸಜ್ಜಾಗಿದೆ.

ಬಾಹ್ಯಾಕಾಶದಲ್ಲಿ ಎರಡು ಉಪಗ್ರಹಗಳನ್ನು ಜೋಡಿಸುವಂಥ (ಡಾಕಿಂಗ್‌) ಸ್ಪೇಡೆಕ್ಸ್‌ ಯೋಜನೆಗಾಗಿ ಎರಡು ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ ರಾಕೆಟ್‌ ಅನ್ನು ಸೋಮವಾರ ರಾತ್ರಿ 10 ಗಂಟೆಗೆ ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ.

ಇದು ಶ್ರೀಹರಿಕೋಟಾದಿಂದ 99ನೇ ಉಡ್ಡಯನ ಯೋಜನೆಯಾಗಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.

ಇಸ್ರೊದ ಭವಿಷ್ಯದ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಂಡಿರುವ ಸೋಮನಾಥ್, '2025ರ ಜನವರಿಯಲ್ಲಿ ಜಿಎಸ್‌ಎಲ್‌ವಿ ಎನ್‌ವಿಎಸ್-02 ನ್ಯಾವಿಗೇಷನ್ ಉಪಗ್ರಹವನ್ನು (ಪಥ ದರ್ಶಕ) ಉಡ್ಡಯನ ಮಾಡುವ ಮೂಲಕ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತೇವೆ' ಎಂದು ತಿಳಿಸಿದ್ದಾರೆ.

2023ರಲ್ಲಿ ಎನ್‌ವಿಎಸ್-01 ನ್ಯಾವಿಗೇಷನ್ ಉಪಗ್ರಹವನ್ನು ಉಡ್ಡಯನ ಮಾಡಲಾಗಿತ್ತು.

'ಭಾರತದ ಬಾಹ್ಯಾಕಾಶ ಕ್ಷೇತ್ರದ ಪಾಲಿಗೆ ಪಿಎಸ್‌ಎಲ್‌ವಿ-ಸಿ60 ಅತ್ಯಂತ ಮಹತ್ವದ ಮಿಷನ್ ಆಗಿತ್ತು. ಇದರ ಯಶಸ್ಸಿನ ಬಳಿಕ ಮುಂಬರುವ ದಿನಗಳಲ್ಲಿ ವಿಜ್ಞಾನಿಗಳು ಇನ್ನಷ್ಟು ಬಾಹ್ಯಾಕಾಶ ಡಾಕಿಂಗ್ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ' ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.