ADVERTISEMENT

ಅಂತರರಾಷ್ಟ್ರೀಯ ಬಾಹ್ಯಾಕಾಶನಿಲ್ದಾಣದಲ್ಲಿ ಒತ್ತಡ ಸೋರಿಕೆ ದುರಸ್ತಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 2:13 IST
Last Updated 31 ಆಗಸ್ಟ್ 2018, 2:13 IST
ಚಿತ್ರ: ನಾಸಾ ವೆಬ್‌ಸೈಟ್‌
ಚಿತ್ರ: ನಾಸಾ ವೆಬ್‌ಸೈಟ್‌   

ವಾಷಿಂಗ್ಟನ್‌:ಅಮೆರಿಕ ಬಾಹ್ಯಾಕಾಶ ಸಂಸ್ಥೆ(ನಾಸಾ) ಮತ್ತು ರಷ್ಯಾ ಬಾಹ್ಯಾಕಾಶ ಸಂಸ್ಥೆಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಒಂದು ಸಣ್ಣ ಒತ್ತಡದ ಸೋರಿಕೆಯನ್ನು ಗುರುತಿಸಿ, ದುರಸ್ತಿ ಮಾಡಿವೆ.

ಒತ್ತಡ ಸೋರಿಕೆಯು 'ಕ್ಯಾಬಿನ್'ನ ಒಂದು ಸಣ್ಣ ನಷ್ಟಕ್ಕೆ ಕಾರಣವಾಗಿತ್ತು.

‘ಎಕ್ಸ್ಪೆಡಿಷನ್‌’ 56 ಸಂಕೀರ್ಣಕ್ಕೆ ಜೋಡಿಸಲಾದ ಎರಡು ರಷ್ಯಾದ ಸೊಯುಜ್‌ ಬಾಹ್ಯಾಕಾಶ ನೌಕೆಗಳನ್ನು ದುರಸ್ತಿ ಮಾಡಿದ ಬಳಿಕ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ‘ಕ್ಯಾಬಿನ್‌’ನ ಒತ್ತಡ ಈಗ ಸ್ಥೀರವಾಗಿದೆ’ ಎಂದು ನಾಸಾ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ADVERTISEMENT

ಬಾಹ್ಯಾಕಾಶ ನಿಲ್ದಾಣದ ರಶಿಯಾದ ’ರಸ್ಪೆಟ್‌ ಮಾಡ್ಯುಲ್‌’ಗೆ ಜೋಡಿಸಲಾದ ಸೊಯುಜ್‌ ಎಂಎಸ್‌–09 ಬಾಹ್ಯಾಕಾಶ ನೌಕೆಯ ಕಕ್ಷೀಯ ವಿಭಾಗ ಅಥವಾ ಮೇಲ್ಭಾಗದಲ್ಲಿ ಎರಡು ಮಿಲಿ ಮೀಟರ್ ವ್ಯಾಸದ ರಂಧ್ರವನ್ನು ದುರಸ್ತಿ ಮಾಡಲಾಗಿದೆ ಎಂದು ಬೆಳಿಗ್ಗೆ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ‘ಕ್ಯಾಬಿನ್‌’ಗೆ ಯಾವುದೇ ಅಪಾಯವಿಲ್ಲ ಎಂದು ಹೇಳಿದೆ.

‘ಕಳೆದ ರಾತ್ರಿ ಬಾಹ್ಯಾಕಾಶ ನಿಲ್ದಾಣದ ಕಕ್ಷೆಯ ಸಂಕೀರ್ಣದಲ್ಲಿ ಉಂಟಾದ ಸೋರಿಕೆಯನ್ನು ಪತ್ತೆ ಹಚ್ಚಲಾಗಿತ್ತು. ಬಾಹ್ಯಾಕಾಶ ನಿಲ್ದಾಣ ಸಿಬ್ಬಂದಿ ದುರಸ್ತಿ ಕೆಲಸ ಕೈಗೊಂಡಿದ್ದಾರೆ. ಎಲ್ಲಾ ವ್ಯವಸ್ಥೆಗಳು ಸುಸ್ಥಿರವಾಗಿವೆ ಮತ್ತು ಯಾವುದೇ ಅಪಾಯವಿಲ್ಲ’ ಎಂದು ನಾಸಾ ಟ್ವಿಟ್‌ ಮಾಡಿದೆ.

ಸೋರಿಕೆಯಾಗುವ ಸಾಧ್ಯತೆಗಳ ಬಗ್ಗೆ ಮತ್ತಷ್ಟು ವಿಶ್ಲೇಷಣೆ ನಡೆಸಲು ರಷ್ಯಾದ ಬಾಹ್ಯಾಕಾಶ ಸಂಸ್ಥೆ ‘ರೆಸ್ಕೋಸ್ಮೊಸ್‌’ ಆಯೋಗವನ್ನು ನೇಮಿಸಿದೆ.

ಹೂಸ್ಟನ್‌ನಲ್ಲಿನ ಉಡ್ಡಯಾನ ನಿಯಂತ್ರಕಗಳು ಬಾಹ್ಯಾಕಾಶ ನಿಲ್ದಾಣದ ‘ಕ್ಯಾಬಿನ್‌’ನ ಒತ್ತಡದ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.