
ಇಸ್ರೊದಿಂದ ಭಾರಿ ಉಪಗ್ರಹ ಉಡ್ಡಯನ
(ಪಿಟಿಐ ಚಿತ್ರ)
ಶ್ರೀಹರಿಕೋಟ (ಆಂಧ್ರ ಪ್ರದೇಶ): 4.4 ಟನ್ ಭಾರದ ಸಂವಹನ ಉಪಗ್ರಹ 'ಸಿಎಂಎಸ್–03' ಇಂದು (ಭಾನುವಾರ) ಸಂಜೆ ನಿಗದಿತ ಕಕ್ಷೆ ಸೇರಿತು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಪ್ರಕಟಿಸಿದೆ.
ಈ ರಾಕೆಟ್ ಅನ್ನು 'ಬಾಹುಬಲಿ' ಎಂದೂ ಕರೆಯಲಾಗುತ್ತಿದ್ದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೊ ಚಾರಿತ್ರಿಕ ಸಾಧನೆ ಮಾಡಿದೆ.
ಶ್ರೀಹರಿಕೋಟದಲ್ಲಿರುವ ಉಡ್ಡಯನ ಕೇಂದ್ರದಿಂದ ಇಂದು (ಭಾನುವಾರ) ಸಂಜೆ 5.26ಕ್ಕೆ ಈ ಉಪಗ್ರಹವನ್ನು ಹೊತ್ತ'ಎಲ್‌ವಿಎಂ–ಎಂ5' ರಾಕೆಟ್ ನಭಕ್ಕೆ ಚಿಮ್ಮಿತು. ಬಳಿಕ ಉಪಗ್ರಹ ನಿಗದಿತ ಭೂಹೊಂದಾಣಿಕೆ ವರ್ಗಾವಣೆ ಕಕ್ಷೆಗೆ (ಜಿಯೊಸಿಂಕ್ರೊನಸ್ ಟ್ರಾನ್ಸ್‌ಫರ್ ಆರ್ಬಿಟ್–ಜಿಟಿಒ) ಸೇರಿತು.
ಉಪಗ್ರಹದ ತೂಕ 4,410 ಕೆ.ಜಿ ಇದ್ದು, ದೇಶದ ಬಾಹ್ಯಾಕಾಶ ಕೇಂದ್ರದಿಂದ ಇದೇ ಮೊದಲ ಬಾರಿಗೆ ಉಡ್ಡಯನ ಮಾಡಿದ ಭಾರಿ ತೂಕದ ಉಪಗ್ರಹ ಇದಾಗಿದೆ ಎಂದು ಇಸ್ರೊ ತಿಳಿಸಿದೆ.
'ಸಿಎಂಎಸ್–03' ಬಹುಬ್ಯಾಂಡ್ ಸಂವಹನ ಉಪಗ್ರಹವಾಗಿದ್ದು, ಭೂಪ್ರದೇಶ ಸೇರಿದಂತೆ ಸಾಗರದ ಕುರಿತು ಮಾಹಿತಿಗಳನ್ನು ಒದಗಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.