ADVERTISEMENT

ಟ್ರಾಫಿಕ್‌ ದಟ್ಟಣೆಗೆ AI ಪರಿಹಾರ: ತಂತ್ರಜ್ಞಾನ ಅಭಿವೃದ್ಧಿಗೆ Intel ನೊಂದಿಗೆ L&T

ಪಿಟಿಐ
Published 5 ಮಾರ್ಚ್ 2024, 15:17 IST
Last Updated 5 ಮಾರ್ಚ್ 2024, 15:17 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಸ್ಮಾರ್ಟ್‌ ಸಿಟಿ ಹಾಗೂ ಸಂಚಾರ ಕ್ಷೇತ್ರ ವಿಭಾಗದಲ್ಲಿ ತುರ್ತು ಸುರಕ್ಷತೆ ಕಾಯ್ದುಕೊಳ್ಳುವ ಉದ್ದೇಶದಿಂದ ಟ್ರಾಫಿಕ್ ನಿರ್ವಹಣೆಗೆ ಸೂಕ್ತ ಮಾರ್ಗೋಪಾಯ ಕಂಡುಕೊಳ್ಳಲು ಎಲ್‌ ಅಂಡ್ ಟಿ ಟೆಕ್ನಾಲಜೀಸ್ ಕಂಪನಿಯು ಇಂಟೆಲ್ ಕಾರ್ಪೊರೇಷನ್ ಜತೆ ಒಡಂಬಡಿಕೆ ಮಾಡಿಕೊಂಡಿದೆ.

ಇಂಟೆಲ್‌ನ ನೂತನ ಎಡ್ಜ್ ಪಾಲುದಾರ ಕಂಪನಿಯಾದ ಎಲ್‌ಟಿಟಿಎಸ್‌ ಓಪನ್ ತಂತ್ರಾಂಶವಾಗಿದ್ದು, ಕೃತಕ ಬುದ್ಧಿಮತ್ತೆ, ಎಡ್ಜ್‌ನ ನಿರ್ವಹಣೆ, ತಂತ್ರಾಂಶಗಳ ಅಭಿವೃದ್ಧಿ, ಅವುಗಳ ಅಳವಡಿಕೆ, ಭದ್ರತೆಯನ್ನು ಹೊಂದಿದೆ. ರಸ್ತೆಯಲ್ಲಿ ಸಂಚರಿಸುವ ಪ್ರತಿಯೊಂದು ವಾಹನವನ್ನು ತಂತ್ರಜ್ಞಾನ ಆಧಾರದಲ್ಲಿ ಸಂಪರ್ಕಿಸಿ, ಅವುಗಳ ಸಂಚಾರವನ್ನು ಉತ್ತಮಪಡಿಸುವ CV2X ಅಪ್ಲಿಕೇಷನ್ ಬಳಸಲಾಗುತ್ತಿದೆ ಎಂದು ಕಂಪನಿ ಹೇಳಿದೆ.

ADVERTISEMENT

ಓಪನ್VINO ಮೂಲಕ ಕೃತಕ ಬುದ್ಧಿಮತ್ತೆ ಬಳಸಿ ಟ್ರಾಫಿಕ್ ನಿರ್ವಹಣೆ ಮಾಡುವುದು. ಜತೆಗೆ ಹೈಬ್ರಿಡ್ ಕೃತಕ ಬುದ್ಧಿಮತ್ತೆಯನ್ನು ಬಳಸಿ ಸ್ಮಾರ್ಟ್ ಸಿಟಿ ಹಾಗೂ ಸಂಚಾರ ವ್ಯವಸ್ಥೆಯಲ್ಲಿ ತುರ್ತು ಸುರಕ್ಷತೆಯನ್ನು ಕಾಯ್ದುಕೊಳ್ಳುವುದು ಸೇರಿದೆ. ಇದೀಗ ಇಂಟೆಲ್‌ ಹಾಗೂ ಎಲ್‌ಟಿಟಿಎಸ್ ಜತೆಗೂಡಿ ಈ ಯೋಜನೆ ಆರಂಭಿಸುತ್ತಿವೆ. ಇದಕ್ಕಾಗಿ ನಿರ್ದಿಷ್ಟ ಹಾರ್ಡ್‌ವೇರ್‌ಗಳನ್ನೇ ಬಳಸಿಕೊಂಡು, ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಯೋಜನೆ ಹೊಂದಿದ್ದೇವೆ ಎಂದು ಎಲ್‌ ಅಂಡ್ ಟಿ ಟೆಕ್ನಾಲಜಿಯ ಸಿಇಒ ಅಭಿಷೇಕ್ ಸಿನ್ಹಾ ತಿಳಿಸಿದ್ದಾರೆ.

'ಕ್ಲಿಷ್ಟಕರ ಮಾಹಿತಿ ಹಾಗೂ ಕಡಿಮೆ ವೆಚ್ಚದಲ್ಲಿ ಮೂಲಕಸೌಕರ್ಯ ನಿರ್ವಹಣೆಗಾಗಿ ಈ ಒಡಂಬಡಿಕೆ ನೆರವಾಗಲಿದೆ’ ಎಂದು ಇಂಟೆಲ್‌ನ ಉಪಾಧ್ಯಕ್ಷೆ ಪಲ್ಲವಿ ಮಹಾಜನ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.