ADVERTISEMENT

ಅಂತರಿಕ್ಷಯಾನ ವಿಳಂಬ | ಸುರಕ್ಷತೆ, ಯೋಜನೆಯ ಪರಿಪೂರ್ಣತೆಗೆ ಆದ್ಯತೆ: ಇಸ್ರೊ

ಪಿಟಿಐ
Published 13 ಜೂನ್ 2025, 5:12 IST
Last Updated 13 ಜೂನ್ 2025, 5:12 IST
<div class="paragraphs"><p>ಫಾಲ್ಕನ್ -9 ರಾಕೆಟ್‌</p></div>

ಫಾಲ್ಕನ್ -9 ರಾಕೆಟ್‌

   

ನವದೆಹಲಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ಕಳುಹಿಸುವ ಮಹತ್ವಾಕಾಂಕ್ಷೆಯ 'ಆ್ಯಕ್ಸಿಯಂ–4' ಯೋಜನೆಯಲ್ಲಿ ಸುರಕ್ಷತೆ ಹಾಗೂ ಪರಿಪೂರ್ಣತೆಗೆ ಆದ್ಯತೆ ನೀಡಲಾಗುತ್ತದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹೇಳಿದೆ.

'ಆ್ಯಕ್ಸಿಯಂ ಸ್ಪೇಸ್, ನಾಸಾ ಹಾಗೂ ಸ್ಪೇಸ್‌ಎಕ್ಸ್ ಜೊತೆ ಇಸ್ರೊ ನಿಕಟವಾಗಿ ಸಂಪರ್ಕದಲ್ಲಿದೆ. ಸುರಕ್ಷತೆ ಹಾಗೂ ಯೋಜನೆಯ ಪರಿಪೂರ್ಣತೆಗೆ ಆದ್ಯತೆ ನೀಡಲಾಗಿದೆ' ಎಂದು ಇಸ್ರೊ ಅಧ್ಯಕ್ಷ ವಿ. ನಾರಾಯಣನ್ ತಿಳಿಸಿದ್ದಾರೆ.

ADVERTISEMENT

ಸ್ಪೇಸ್‌ಎಕ್ಸ್‌ನ ಫಾಲ್ಕನ್ -9 ರಾಕೆಟ್‌ನಲ್ಲಿ ಸೋರಿಕೆಯಾಗಿದ್ದರಿಂದ ಶುಭಾಂಶು ಹಾಗೂ ಇತರೆ ನಾಲ್ವರ ಅಂತರಿಕ್ಷಯಾನವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಮಿಷನ್‌ನ ಪರೀಕ್ಷೆಯ ವೇಳೆ 'ಪ್ರೊಪಲ್ಷನ್‌ ವ್ಯವಸ್ಥೆ'ಯಲ್ಲಿ ದ್ರವ ಆಮ್ಲಜನಕ ಸೋರಿಕೆ ಪತ್ತೆಯಾದ ಕಾರಣ ಯೋಜನೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಉಡಾವಣೆಯ ಮುಂದಿನ ದಿನಾಂಕ ಮತ್ತು ಸಮಯ ಘೋಷಣೆಯಾಗಿಲ್ಲ.

ಇದರೊಂದಿಗೆ ನಾಲ್ಕನೇ ಬಾರಿ ಯೋಜನೆ ಮುಂದೂಡಲಾಗಿದೆ. ಈ ಹಿಂದೆ ಮೇ 29, ಜೂನ್ 8, ಜೂನ್ 1 ಹಾಗೂ ಜೂನ್ 11ರಂದು ನಿಗದಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.