ADVERTISEMENT

ಕನ್ನಡ ಕಲಿಯದ ಅನ್ಯ ರಾಜ್ಯದವರಿಗೆ ಬೆಂಗಳೂರು ಬಂದ್: ಕಿಡಿ ಹೊತ್ತಿಸಿದ ಟ್ವೀಟ್

ಪಿಟಿಐ
Published 25 ಜನವರಿ 2025, 13:04 IST
Last Updated 25 ಜನವರಿ 2025, 13:04 IST
<div class="paragraphs"><p>ಎಕ್ಸ್ ಚಿತ್ರ</p></div>
   

ಎಕ್ಸ್ ಚಿತ್ರ

ಬೆಂಗಳೂರು: ಕನ್ನಡ ಕಲಿಯದ ಉತ್ತರ ಭಾರತ ಹಾಗೂ ಇತರ ರಾಜ್ಯದವರಿಗೆ ಬೆಂಗಳೂರು ಪ್ರವೇಶವಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಒಕ್ಕಣೆಯೊಂದು, ಆನ್‌ಲೈನ್ ವೇದಿಕೆಯಲ್ಲಿ ಚರ್ಚೆಯ ಕಿಡಿ ಹೊತ್ತಿಸಿದೆ.

‘ಕನ್ನಡ ಭಾಷೆ ಹಾಗೂ ಸಂಸ್ಕೃತಿಗೆ ಗೌರವ ಕೊಡದವರಿಗೆ ಬೆಂಗಳೂರಿನ ಅಗತ್ಯವಿಲ್ಲ. ಹೀಗಾಗಿ ಕನ್ನಡ ಕಲಿಯದ ಉತ್ತರ ಭಾರತೀಯರು ಹಾಗೂ ಇತರ ರಾಜ್ಯದವರಿಗೆ ಬೆಂಗಳೂರು ಬಂದ್ ಆಗಿದೆ’ ಎಂಬ ಪೋಸ್ಟ್‌ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಆಗಿತ್ತು. ಬಬ್ರುವಾಹನ (@Paarmatma) ಎಂಬ ಟ್ವಿಟರ್‌ ಹ್ಯಾಂಡ್ಲರ್‌ನಿಂದ ಇದು ಪೋಸ್ಟ್ ಆಗಿದೆ. ಈ ಸುದ್ದಿ ಪ್ರಕಟವಾಗುವವರೆಗೂ ಈ ಟ್ವೀಟ್‌ ಅನ್ನು 1.20ಲಕ್ಷ ಜನ ವೀಕ್ಷಿಸಿದ್ದಾರೆ. 249 ಜನ ರಿಪೋಸ್ಟ್ ಮಾಡಿದ್ದಾರೆ. 1,839 ಲೈಕ್‌ಗಳು ಬಂದಿವೆ.

ADVERTISEMENT

ಇದಕ್ಕೆ ಹಲವರು ಪ್ರತಿಕ್ರಿಯಿಸಿದ್ದಾರೆ. ‘ಬೆಂಗಳೂರಿಗೆ ವಲಸೆ ಬಂದವರು’ ಎಂಬ ಪದ ತುಸು ಹೆಚ್ಚೆನಿಸುತ್ತಿದೆ. ಆದರೆ, ಬೆಂಗಳೂರಿನಲ್ಲಿ ಕನ್ನಡ ಭಾಷೆಯನ್ನು ನೋಡುವ ರೀತಿಯಿಂದ ಮನಸ್ಸಿಗೆ ತೀವ್ರ ನೋವಾಗಿದೆ. ಕೆಲವರು ಇದೊಂದು ಬುಡಕಟ್ಟು ಭಾಷೆ ಎನ್ನುವಂತೆ ನೋಡುತ್ತಾರೆ. ಕಾರ್ಪೊರೇಟ್ ಕಚೇರಿಗಳಲ್ಲಂತೂ ಕನ್ನಡವನ್ನು ನಡೆಸಿಕೊಳ್ಳುವ ರೀತಿ ಮನಸ್ಸಿಗೆ ತೀವ್ರ ನೋವನ್ನುಂಟು ಮಾಡುತ್ತಿದೆ. ಅತಿ ಹೆಚ್ಚು ಜ್ಞಾನಪೀಠ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ನೆರವಾದ ಈ ಶ್ರೀಮಂತ ಭಾಷೆಯನ್ನು ತೀವ್ರವಾಗಿ ಕಡೆಗಣಿಸಲಾಗುತ್ತಿದೆ’ ಎಂದಿದ್ದಾರೆ.

‘ಕನ್ನಡದ ಹೆಮ್ಮೆ ಕುರಿತು ಸಕಾರಾತ್ಮಕ ಭಾವನೆಯನ್ನು ಮೂಡಿಸುವುದು ಕನ್ನಡಿಗರಾದ ನಮ್ಮೆಲ್ಲರ ಗುರುತರ ಜವಾಬ್ದಾರಿ ಪ್ರದರ್ಶಿಸಲು ಇದು ಸಕಾಲವಾಗಿದೆ. ಆ ಮೂಲಕ ಈ ಹೆಮ್ಮೆಯ ಭಾಷೆ ಕುರಿತ ನಕಾರಾತ್ಮಕ ಆಲೋಚನೆಗಳನ್ನು ತೊಡೆದುಹಾಕಲು ಸಾಧ್ಯ. ಭಾಷೆ ಹಾಗೂ ಸಂಸ್ಕೃತಿ ಕುರಿತು ಹೆಮ್ಮೆ ಪಡೆಯುವುದೇ ಅತಿ ದೊಡ್ಡ ಆತ್ಮಾಭಿಮಾನ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

‘ಬೆಂಗಳೂರು ಇಂದು ಬೆಳೆದಿದ್ದೇ ಕಠಿಣ ಪರಿಶ್ರಮದ ಜನರಿಂದ. ಈ ಬೆಳವಣಿಗೆಗೆ ದೇಶದ ಎಲ್ಲಾ ಪ್ರದೇಶಗಳ ಜನರ ಕೊಡುಗೆ ಇದೆ. ಈಗೇನು ಬೆಂಗಳೂರು ಬೆಳೆದು ನಿಂತಿದೆಯೋ ಅದಕ್ಕೆ ಕಾರಣರಾದವರನ್ನು ಮರೆಯಬೇಡಿ. ಇದನ್ನು ಸುಮ್ಮನೆ ನೋಡುತ್ತಾ ಕುಳಿತಿರುವ ಕನ್ನಡ ಹಾಗೂ ಕರ್ನಾಟಕ ಸರ್ಕಾರಕ್ಕೆ ನಾಚಿಕೆಯಾಗಬೇಕು’ ಎಂದು ಕಿಡಿಕಾರಿದ್ದಾರೆ.

ಮತ್ತೊಬ್ಬರು ಪ್ರತಿಕ್ರಿಯಿಸಿ, ‘ಕನ್ನಡ ಭಾಷೆ ಕಲಿಯುವುದು ಉತ್ತಮ ಸಂಗತಿ. ಆದರೆ ಪ್ರತಿಯೊಂದು ಕಚೇರಿಯಲ್ಲೂ ಕನ್ನಡ ಭಾಷೆ ಕಲಿಕೆಗೆ ಸರ್ಕಾರ ಉತ್ತಮ ಶಿಕ್ಷಕರನ್ನು ನಿಯೋಜಿಸುವ ಕೆಲಸ ಮಾಡಬೇಕು. ಕೋಡಿಂಗ್ ಕೂಡಾ ಕನ್ನಡದಲ್ಲಿರುವಂತೆ ಸರ್ಕಾರ ಯೋಜನೆ ರೂಪಿಸಬೇಕು. ನಂತರ ಬೇರೆ ರಾಜ್ಯದವರನ್ನು ಅವರವರ ರಾಜ್ಯಗಳಿಗೆ ಕಳುಹಿಸಲಿ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.