ADVERTISEMENT

ಟ್ರಾಫಿಕ್‌ನಲ್ಲೇ ಲವ್‌, ಮದುವೆ: ಇನ್ನೂ ಮುಗಿದಿಲ್ಲ ‘ಈಜಿಪುರ ಮೇಲ್ಸೇತುವೆ‘!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಸೆಪ್ಟೆಂಬರ್ 2022, 12:12 IST
Last Updated 21 ಸೆಪ್ಟೆಂಬರ್ 2022, 12:12 IST
ಟ್ರಾಫಿಕ್‌ ಸಾಂಕೇತಿಕ ಚಿತ್ರ
ಟ್ರಾಫಿಕ್‌ ಸಾಂಕೇತಿಕ ಚಿತ್ರ   

ಬೆಂಗಳೂರು: ಟ್ರಾಫಿಕ್‌ ಜಾಮ್‌ನಲ್ಲೇ ಪ್ರೀತಿ ಮಾಡಿದೆ, ಮುಂದೆ ಮದುವೆಯಾದೆ! ಆದರೆ ‘ಈಜಿಪುರ ಮೇಲ್ಸೇತುವೆ‘ ಕಾಮಗಾರಿ ಮಾತ್ರ ಇನ್ನೂ ನಡೆಯುತ್ತಲೇ ಇದೆ...?

ರೆಡ್ಡಿಟ್‌ ಟ್ವಿಟರ್‌ ಬಳಕೆದಾರರೊಬ್ಬರು 5 ವರ್ಷಗಳು ಕಳೆದರೂ‘ಈಜಿಪುರ ಮೇಲ್ಸೇತುವೆ‘ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಆದರೆ ಈ ವರ್ಷಗಳಲ್ಲಿ ನನ್ನ ಪ್ರೀತಿ ಅರಳಿ, ಮದುವೆಯಾದರೂ ಕಾಮಗಾರಿ ಮಾತ್ರ ಕುಂಟುತ್ತ ಸಾಗಿದೆ ಎಂದು ವ್ಯಂಗ್ಯವಾಗಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ಪೋಸ್ಟ್‌ ಅನ್ನು ನೆಟ್ಟಿಗರು ಹಂಚಿಕೊಂಡಿದ್ದು ಅಧಿಕಾರಿಗಳ ಕೆಲಸ ಬಗ್ಗೆ ಕಿಡಿಕಾರಿದ್ದಾರೆ. ಟ್ರಾಫಿಕ್‌ ಸುಧಾರಣೆ ಬಗ್ಗೆ ಆಸಕ್ತಿ ತೋರದ ಅಧಿಕಾರಿಗಳ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್‌ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

5 ವರ್ಷಗಳ ಹಿಂದೆ...

‘ಈಜಿಪುರ ಮೇಲ್ಸೇತುವೆ‘ ಕಾಮಗಾರಿ ನಡೆಯುತ್ತಿರುವ ‘ಸೋನಿ ವರ್ಲ್ಡ್‌‘ ಸಮೀಪ ಟ್ರಾಫಿಕ್‌ ಜಾಮ್‌ನಲ್ಲಿ ಅವಳನ್ನು ನೋಡಿದೆ. ಈ ಸಂಚಾರದ ಕಿರಿ ಕಿರಿಯಲ್ಲಿ ಪರಿಚಿತರಾಗಿ ಆಪ್ತರಾದೆವು. ನಂತರದ ದಿನಗಳಲ್ಲಿ ಅವಳನ್ನು ಮನೆಗೆ ಡ್ರಾಪ್‌ ಮಾಡುತ್ತಿದೆ. ಈ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಸುಸ್ತಾಗಿ, ಹೊಟ್ಟೆ ಹಸಿವಿನಿಂದ ಸಮೀಪದಲ್ಲಿರುವ ಹೋಟೆಲ್‌ಗಳಿಗೆ ಹೋಗುತ್ತಿದ್ದೆವು. ಹೀಗೆ ನಮ್ಮ ಬಾಂಧವ್ಯ ಮುಂದುವರೆಯಿತು. ಮೂರು ವರ್ಷಗಳು ನಾವು ಡೇಟಿಂಗ್‌ ಮಾಡಿದೆವು.

2 ವರ್ಷಗಳ ಹಿಂದೆ ಅವಳನ್ನು ಮದುವೆಯಾದೆ. ಸದ್ಯ ಅದೇ ಕಾಮಗಾರಿ ರಸ್ತೆಯಲ್ಲಿ ಮನೆಯಿಂದ ಕಚೇರಿಗೆ ಓಡಾಡುತ್ತಿದ್ದು, ನಿತ್ಯವೂ ಟ್ರಾಫಿಕ್‌ನಲ್ಲಿ ‘ಜಾಮ್‌‘ ಆಗುತ್ತಿದ್ದೇನೆ. 5 ವರ್ಷ ಕಳೆದರೂ 2.5 ಕೀ.ಮೀಟರ್‌ ಉದ್ದದ ಈ ಮೇಲ್ಸೇತುವೆ ಕಾಮಗಾರಿ ಮಾತ್ರ ಇನ್ನೂ ನಡೆಯುತ್ತಲೇ ಇದೆ ಎಂದು ನಿರ್ಮಾಣ ಕಾರ್ಯದ ಆಮೆ ನಡಿಗೆ ಕುರಿತು ಗಮನ ಸೆಳೆದಿದ್ದಾರೆ.

ಇಲ್ಲಿ ನಾನು ಎಲ್ಲಾ ಕಥೆಯನ್ನು ಬರೆಯುತ್ತಿಲ್ಲ ಎಂದು ಹೇಳುವ ಮೂಲಕ ಅವರು ಬರಹವನ್ನು ಪೋಸ್ಟ್‌ ಮಾಡಿದ್ದಾರೆ.

ಈ ಬರಹಕ್ಕೆ ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.