ADVERTISEMENT

ಭಾರತೀಯ ಪ್ರತಿಭೆಗಳಿಂದ ಪ್ರಯೋಜನ ಪಡೆಯುತ್ತಿರುವ ಅಮೆರಿಕ: ಎಲೊನ್ ಮಸ್ಕ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ನವೆಂಬರ್ 2021, 6:14 IST
Last Updated 30 ನವೆಂಬರ್ 2021, 6:14 IST
ಟ್ವಿಟರ್‌ ಹೊಸ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿ ಭಾರತೀಯ ಮೂಲದ ಪರಾಗ್ ಅಗರ್‌ವಾಲ್ ನೇಮಕ
ಟ್ವಿಟರ್‌ ಹೊಸ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿ ಭಾರತೀಯ ಮೂಲದ ಪರಾಗ್ ಅಗರ್‌ವಾಲ್ ನೇಮಕ   

ಬೆಂಗಳೂರು: ಟ್ವಿಟರ್‌ ಹೊಸ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿ ಭಾರತೀಯ ಮೂಲದ ಪರಾಗ್ ಅಗರ್‌ವಾಲ್ ನೇಮಕಗೊಂಡಿದ್ದಾರೆ.

ಈ ಮೂಲಕ ಅಮೆರಿಕದ ಆರು ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳ ಸಿಇಒ ಆಗಿ ಭಾರತೀಯರು ನೇಮಕಗೊಂಡಿರುವುದು ಭಾರತೀಯರಿಗೆ ಸಂತಸ ತಂದಿದ್ದರೆ, ಅಮೆರಿಕದ ಕೆಲವರಿಗೆ ಅಸಮಾಧಾನ ತಂದಿದೆ.

ಈ ವಿಚಾರ ಕುರಿಂತೆ ಟ್ವೀಟ್ ಮಾಡಿರುವ ಪ್ಯಾಟ್ರಿಕ್ ಕೊಲಿಸನ್, ಪ್ರಮುಖ ಕಂಪನಿಗಳ ಸಿಇಒ ಆಗಿ ಭಾರತೀಯ ಮೂಲದವರೇ ನೇಮಕವಾಗುತ್ತಿದ್ದಾರೆ. ವಲಸಿಗರಿಗೆ ಅಮೆರಿಕ ನೀಡುತ್ತಿರುವ ಅವಕಾಶ ಇದು ಎಂದಿದ್ದಾರೆ.

ADVERTISEMENT

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಎಲೊನ್ ಮಸ್ಕ್, ಭಾರತೀಯ ಪ್ರತಿಭೆಗಳಿಂದ ಅಮೆರಿಕಾಗೆ ಪ್ರಯೋಜನವಾಗುತ್ತಿದೆ ಎಂದಿದ್ದಾರೆ.

ಜತೆಗೆ ಹಲವರು ಎಲೊನ್ ಮಸ್ಕ್ ಮಾತಿಗೆ ಸಹಮತ ವ್ಯಕ್ತಪಡಿಸಿದ್ದಾರೆ.

ಪ್ಯಾಟ್ರಿಕ್ ಕೊಲಿಸನ್ ಹೇಳಿಕೆಯನ್ನು ಒಪ್ಪದವರು, ಅಮೆರಿಕಕ್ಕೆ ವಲಸೆ ಬಂದಿರುವ ಇತರ ರಾಷ್ಟ್ರಗಳ ಹಲವರು ಕೂಡ ಒಂದಿಲ್ಲೊಂದು ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.